Home » MRPL: ಎಂಆರ್‌ಪಿಎಲ್‌ನಲ್ಲಿ ದುರಂತ ಸಾವು ಪ್ರಕರಣ: ದೂರು ದಾಖಲು

MRPL: ಎಂಆರ್‌ಪಿಎಲ್‌ನಲ್ಲಿ ದುರಂತ ಸಾವು ಪ್ರಕರಣ: ದೂರು ದಾಖಲು

by V R
0 comments

MRPL: ಎಂಆರ್‌ಪಿಎಲ್‌ ಘಟಕದಲ್ಲಿ ಶನಿವಾರ ನಡೆದ ದುರಂತದಲ್ಲಿ ಕಾರ್ಮಿಕ ದೀಪ್‌ಚಂದ್ರ ಬಾರ್ತಿಯ‌ ಎಂಬುವವರು ಮೃತಪಟ್ಟಿದ್ದು, ಅವರ ಪತ್ನಿ ಇದೀಗ ದೂರನ್ನು ನೀಡಿದ್ದಾರೆ. ಎಂಆರ್‌ಪಿಎಲ್‌ನ 6 ಮಂದಿ ಅಧಿಕಾರಿಗಳ ವಿರುದ್ಧ ಸುರತ್ಕಲ್‌ ಪೊಲೀಸರು ಕಾರ್ಮಿಕ ದೀಪ್‌ಚಂದ್ರ ಬಾರ್ತಿಯ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿದ್ದಾರೆ.

ದೀಪ್‌ಚಂದ್ರ ಬಾರ್ತಿಯ ಹಾಗೂ ಇಜಿಲ್‌ ಪ್ರಸಾದ್‌ ಗ್ಯಾಸ್‌ನ ಘಾಟು ವಾಸನೆಯ ದುರಂತದಿಂದ ಮೃತಪಟ್ಟಿದ್ದರು. ಸುರತ್ಕಲ್‌ ಉಪತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿ ಜಿಲ್ಲಾಧಿಕಾರಿಗಳಿಗೆ ಪ್ರಥಮ ಮಾಹಿತಿಯನ್ನು ನೀಡಿದ್ದಾರೆ.

ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ಮೃತ ಕಾರ್ಮಿಕ ದೀಪ್‌ಚಂದ್ರ ಬಾರ್ತಿಯ ಅವರ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದ ಸಹೋದ್ಯೋಗಿಗಳಿಗೆ ಮೃತನ ಕುಟುಂಬದವರು ದಿಗ್ಬಂಧನ ಹಾಕಿದ್ದು, ಸಾವಿಗೆ ಕುರಿತಂತೆ ಎಂಆರ್‌ಪಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಬೇಕು. ಪರಿಹಾರದ ಬೇಡಿಕೆಯನ್ನು ಈಡೇರಿಸಬೇಕು ಎಂದು ಪಟ್ಟು ಹಿಡಿದಿರುವ ಕುರಿತು ವರದಿಯಾಗಿದೆ.

ಸೋಮವಾರ (ಇಂದು) ಬೆಳಗ್ಗೆ 9ಗೆ ಎಂಆರ್‌ಪಿಎಲ್‌ ಕಾರ್ಗೊಗೇಟ್‌ ಮುಂಭಾಗ ಮೃತಪಟ್ಟ ನೌಕರರ ಕುಟುಂಬದವರಿಗೆ ಕಂಪನಿ ಸೂಕ್ತ ಪರಿಹಾರ ನೀಡಬೇಕೆಂದು ಕಂಪನಿಯ ನೌಕರರ ಸಂಘಟನೆ ಪ್ರತಿಭಟನೆ ಮಾಡಲಿರುವ ಕುರಿತು ವರದಿಯಾಗಿದೆ.

You may also like