Home » Mukesh Ambani: ಮುಖೇಶ್ ಅಂಬಾನಿಯ ಬಣ್ಣ ಬದಲಾಯಿಸೋ ರೋಲ್ಸ್‌ ರಾಯ್ಸ್‌ SUV: ಇದರ ಪೇಂಟ್ ಕೆಲಸಕ್ಕೇ 1 ಕೋಟಿ ಖರ್ಚಾಗಿದೆ, ಹಾಗಾದ್ರೆ ಕಾರಿನ ಬೆಲೆ ಎಷ್ಟಿರಬಹುದು ಊಹಿಸಿ !

Mukesh Ambani: ಮುಖೇಶ್ ಅಂಬಾನಿಯ ಬಣ್ಣ ಬದಲಾಯಿಸೋ ರೋಲ್ಸ್‌ ರಾಯ್ಸ್‌ SUV: ಇದರ ಪೇಂಟ್ ಕೆಲಸಕ್ಕೇ 1 ಕೋಟಿ ಖರ್ಚಾಗಿದೆ, ಹಾಗಾದ್ರೆ ಕಾರಿನ ಬೆಲೆ ಎಷ್ಟಿರಬಹುದು ಊಹಿಸಿ !

by ಹೊಸಕನ್ನಡ
0 comments
Mukesh Ambani

Mukesh Ambani: ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಮತ್ತು ಅವರ ಬಳಿ ಇರುವ ಐಷಾರಾಮಿ ವಸ್ತುಗಳು ದಿನಕ್ಕೊಂದರಂತೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೂ ಅವರ ಮತ್ತು ಅವರ ಕುಟುಂಬದ ಕುರಿತಾದ ಆ ಸುದ್ದಿಗಳು ಖಾಲಿ ಆಗುವುದಿಲ್ಲ. ದಿನದಿಂದ ದಿನಕ್ಕೆ ಹೊಸ ಹೊಸ ವಿಷಯಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಅಷ್ಟರ ಮಟ್ಟಿಗೆ ಅವರದು ಶ್ರೀಮಂತಿಕೆಯ ಮತ್ತು ವರ್ಣ ರಂಜಿತ ಬದುಕು.

ಮುಕೇಶ್ ಅಂಬಾನಿಯವರು(Mukesh Ambani)ಮತ್ತು ಆತನ ಪತ್ನಿ ನೀತಾ ಅಂಬಾನಿಯವರು ನಮ್ಮ ಜನರು ಕನಸು ಹುಟ್ಟು ಹಾಕುವಂತಹ ಕನಸು ಕಾಣಬಲ್ಲಂತಹ ಹತ್ತಾರು ನೂರಾರು ವಸ್ತುಗಳಿಗೆ ಆಸ್ತಿಗಳಿಗೆ ಒಡೆಯರು. ನಮ್ಮಲ್ಲಿ ಇವುಗಳನ್ನು ಖರೀದಿಸಲು ಹೆಚ್ಚಿನವರು ಕೇವಲ ಕನಸಲ್ಲಿ ಮಾತ್ರ ಸಾಧ್ಯ ಎನ್ನಬಹುದು. ಮುಂಬೈನಲ್ಲಿ ಮುಖೇಶ್ ಬಲಿ 15,000 ರೂ. ಬಾಡಿಗೆ ಬರುವ ಮನೆಯಿಂದ ಹಿಡಿದು 850 ಕೋಟಿ ರೂ. ಮೌಲ್ಯದ ಖಾಸಗಿ ಜೆಟ್‌ಗಳವರೆಗೆ, ಇವತ್ತಿಗೂ ಸರಿಯಾಗಿ ಲೆಕ್ಕ ಸಿಗದ ಶತಶತ ಕೋಟಿ ಮೌಲ್ಯದ ಅಂಟಿಲೀಯ ಮನೆಯವರೆಗೆ ಮುಖೇಶ್ ಅಂಬಾನಿ ಕುಟುಂಬದ ಆಸ್ತಿ, ಸ್ಟೈಲ್ ಇತ್ಯಾದಿಗಳು ಹೊಸದಾಗಿ ಸಂಗ್ರಹ ಗೊಳ್ಳುತ್ತದೆ ಇವೆ. ಇವುಗಳ ಮಧ್ಯೆ ಮುಕೇಶ್ ಅಂಬಾನಿ ಮತ್ತು ಆತನ ಪತ್ನಿ ಮಕ್ಕಳು ವಿಪರೀತ ಕಾರ್ ಕ್ರೇಜ್ ಉಳ್ಳವರು. ಅವರ ಬಳಿ ಹತ್ತಾರು ಐಷಾರಾಮಿ ಕಾರುಗಳಿವೆ. ಅವರು ತಮ್ಮ ಕಲೆಕ್ಷನ್ ಗೆ ಹಲವು ಆಂಟಿಕ್ ಕಾರುಗಳನ್ನು ತಂದು ಸೇರಿಸಿದ್ದಾರೆ. ಇದು ಅಂತಹ ವಿಭಿನ್ನ ಕಾರಿನ ವಿಷ್ಯ.

ಮುಖೇಶ್‌ ಅಂಬಾನಿರೋಲ್ಸ್‌ ರಾಯ್ಸ್‌, ಬೆಂಟ್ಲಿ, ಲ್ಯಾಂಡ್ ರೋವರ್, ಲ್ಯಾಂಬೋರ್ಘಿನಿ ಮತ್ತು ಇತರ ಹಲವು ಕಾರು
ಗಳನ್ನು ಒಳಗೊಂಡಿರುವ ಅತಿ ದುಬಾರಿ ಮತ್ತು ಅಪರೂಪದ ಕಾರುಗಳ ಕಲೆಕ್ಷನ್ ಹೊಂದಿದ್ದಾರೆ. ಮುಖೇಶ್ ಅಂಬಾನಿ ಭಾರತದಲ್ಲಿನ ಅತ್ಯಂತ ದುಬಾರಿ ಎಸ್‌ಯುವಿಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಕಲ್ಲಿನಾನ್‌ನ ಮಾಲೀಕರೂ ಆಗಿದ್ದಾರೆ.

Rolls-Royce Cullinan ಅನ್ನೋದು ಇತರ ಯಾವುದೇ ಸಾಮಾನ್ಯ ಎಸ್‌ಯುವಿ ಅಲ್ಲದಿದ್ದರೂ, ಅದೊಂದು SUV ಮಾದರಿಯ ಐಷಾರಾಮಿ ಕಾರು. ಈ ಕಾರನ್ನು ಮತ್ತೊಂದು ಹಂತಕ್ಕೆ, ಮೇಲಕ್ಕೆ ಹೊಸ ಫೀಚರ್ ಜತೆ ತೆಗೆದುಕೊಂಡು ಹೋಗಲು, ಮುಖೇಶ್‌ ಅಂಬಾನಿ ಅದಕ್ಕೆ ‘ಬಣ್ಣ ಬದಲಾಯಿಸುವ’ ಕೆಲಸ ಕೊಡಿಸಿದ್ದಾರೆ. ಮುಖೇಶ್ ಅಂಬಾನಿ ಒಡೆತನದ ರೋಲ್ಸ್ ರಾಯ್ಸ್ ಕಲ್ಲಿನಾನ್‌ ಕೆಮಿಲಿಯನ್ ಥರ ಬಣ್ಣ ಬದಲಾಯಿಸುತ್ತದೆ. ಈ ಕಾರನ್ನು ವಿವಿಧ ಕೋನಗಳಲ್ಲಿ ನೋಡಿದರೆ ಅದು ವಿವಿಧ ಶೇಡ್‌ ಅಥವಾ ಬಣ್ಣಗಳಲ್ಲಿ ಕಾಣಿಸುತ್ತದೆ. ಈಗ ಇನ್ಸ್ಟಾಗ್ರಾಮ್‌ ಬಳಕೆದಾರರೊಬ್ಬರ ಚುರುಕು, ಶಾರ್ಪ್ ಕಣ್ಣುಗಳಲ್ಲಿ ಈ ವಿಶೇಷ ಕಾರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಆ ವಿಶೇಷ ಕಾರಿನ ವಿಡಿಯೋ ಇಲ್ಲಿದೆ ನೋಡಿ.

ಈ ವಿಡಿಯೋದಲ್ಲಿ, ಮುಖೇಶ್ ಅಂಬಾನಿಯವರ ರೋಲ್ಸ್ ರಾಯ್ಸ್ ಕಲ್ಲಿನಾನ್‌ ಎಸ್‌ಯುವಿ ಕಣ್ಣುಗಳ ಮುಂದೆ ಬಣ್ಣಗಳನ್ನು ಬದಲಾಯಿಸುತ್ತಿರುವುದನ್ನು ಕಾಣಬಹುದು. ಕಾರಿಗೆ ವಿಶೇಷ ಬಣ್ಣದ ಕೆಲಸವಿಲ್ಲದಿದ್ದರೂ, ಸೈಕೆಡೆಲಿಕ್ ವ್ರಾಪ್‌ ಅನ್ನು ಮಾಡಲಾಗಿದೆ. ಕಲ್ಲಿನಾನ್‌ನ ವ್ರಾಪ್‌ ವಿವಿಧ ಶೇಡ್‌ಗಳ ದೀಪಗಳ ಅಡಿಯಲ್ಲಿ ವಿವಿಧ ಬಣ್ಣಗಳನ್ನು ಪ್ರತಿಬಿಂಬಿಸುತ್ತದೆ. ಇದು ನೋಡುಗರ ಕಣ್ಣುಗಳಲ್ಲಿ ಕಾರಿನ ಬಣ್ಣವನ್ನು ಬದಲಾಯಿಸುವ ಭ್ರಮೆಯನ್ನು ಉಂಟುಮಾಡುತ್ತದೆ. ಮುಖೇಶ್ ಅವರ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನ ಪೇಂಟ್‌ ಬೆಲೆ ಕೇಳಿದ್ರೆ ಆ ದುಡ್ಡಲ್ಲಿ ಇನ್ನೊಂದು ಐಷಾರಾಮಿ ಕಾರುಕೊಳ್ಳಬಹುದು.

ಹೌದು ಸಾರ್, ಈ ಕಾರಿನ ಪೇಂಟ್ ಗೆ ವಿಪರೀತ ಖರ್ಚು ಆಗಿದೆ. ಟಸ್ಕನ್ ಸನ್ ಶೇಡ್‌ನಲ್ಲಿ ರೋಲ್ಸ್ ರಾಯ್ಸ್ ಕಲ್ಲಿನಾನ್‌ನ ಪೇಂಟ್ ಕೆಲಸಕ್ಕೆ ಸುಮಾರು 1 ಕೋಟಿ ರೂಪಾಯಿ ಆಗಿದೆ ಎಂದು Cartoq ವರದಿ ಮಾಡಿದೆ. ಭಾರತದಲ್ಲಿ ಈ ಕಲ್ಲಿನಾನ್‌ ಕಾರಿನ ಬೆಲೆಯು 6.8 ಕೋಟಿ ರೂಪಾಯಿಯಿಂದ ಪ್ರಾರಂಭವಾದರೂ, ಇತರ ಕಸ್ಟಮೈಸೇಶನ್‌ಗಳ ಜೊತೆಗೆ ಪೇಂಟ್‌ ಕೆಲಸವು ಕಾರಿನ ಬೆಲೆಯನ್ನು ಸುಮಾರು 13.14 ಕೋಟಿ ರೂಪಾಯಿಗಳಿಗೆ ಹಿಗ್ಗಿಸಿದೆ ಎಂದು ವರದಿಯಾಗಿದೆ. ಅಂಬಾನಿ ಕುಟುಂಬ ಈ ಹೊಸ ರೋಲ್ಸ್‌ ರಾಯ್ಸ್‌ ಕಲ್ಲಿನಾನ್‌ ಕಾರಿನ ಜತೆ ಇತ್ತೀಚೆಗೆ ಕಾಣಿಸಿಕೊಂಡಿತ್ತು. ಇನ್ನು ಈ ಕಾರಿನ ನೋಂದಣಿ ಸಂಖ್ಯೆ ‘0001’ ಆಗಿದ್ದು, ಅದಕ್ಕೆ ಕೂಡಾ ಕುಟುಂಬವು ಬರೋಬ್ಬರಿ 12 ಲಕ್ಷ ರೂಪಾಯಿ ಖರ್ಚು ಮಾಡಿದೆ.

ವರದಿಗಳ ಪ್ರಕಾರ, ಈ ಹೊಸ ಕಾರು ಮುಖೇಶ್ ಅಂಬಾನಿ ಅವರ ಬಳಕೆಗಾಗಿ ಖರೀದಿಸಿಲ್ಲವಂತೆ; ಈ ಹೊಸ ಕಾರನ್ನು ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಎಂಗೇಜ್ ಮೆಂಟ್ ಉಡುಗೊರೆಯಾಗಿ ನೀಡಲಾಗಿದೆ ಎನ್ನಲಾಗಿದೆ. ಈಗ ನಾವು ಹೇಳಿದ ಕಾರು ಮುಕೇಶ್ ಅಂಬಾನಿ ಅವರ ಒಂದು ಚಿಕ್ಕ, ಆದ್ರೆ ವಿಶೇಷ ಸಂಪತ್ತಿನ ಭಾಗವಷ್ಟೇ!

ಇದನ್ನೂ ಓದಿ: UT ಖಾದರ್ ಸಾಹೇಬ್ರ ಮಾತು ಅರ್ಥ ಆಗ್ತಿಲ್ಲ: ಸ್ಪೀಕರ್ ಟು ಕನ್ನಡ ಆಪ್ ಮಾಡಿಕೊಡಿ ಅಂದ ಯತ್ನಾಳ್ – ಸದನದಲ್ಲಿ ಸ್ವಾರಸ್ಯಮಯ ಘಟನೆ

You may also like

Leave a Comment