Home » Mulki: ಮುಲ್ಕಿ: ಪ್ರಥಮ ಬಾರಿಗೆ ಕರಾವಳಿಯ ದೇವಸ್ಥಾನದ ಬ್ರಹ್ಮರಥ ಡಿಜಿಟಲ್ 3ಡಿ ಮಾಡೆಲ್ ಮತ್ತು ಅನಿಮಷನ್

Mulki: ಮುಲ್ಕಿ: ಪ್ರಥಮ ಬಾರಿಗೆ ಕರಾವಳಿಯ ದೇವಸ್ಥಾನದ ಬ್ರಹ್ಮರಥ ಡಿಜಿಟಲ್ 3ಡಿ ಮಾಡೆಲ್ ಮತ್ತು ಅನಿಮಷನ್

by ಕಾವ್ಯ ವಾಣಿ
0 comments

Mulki: ತುಳುನಾಡಿನ ಪರಂಪರೆಯನ್ನು ಡಿಜಿಟಲ್ ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಮುಲ್ಕಿ (Mulki) ಬಪ್ಪನಾಡು ದೇವಸ್ಥಾನದ ಬ್ರಹ್ಮರಥದ 3ಡಿ ಮಾಡೆಲ್ ಮಾಡಿ, ಬ್ರಹ್ಮರಥ ನಿರ್ಮಾಣದ ಅನಿಮಷನನ್ನು ಜ್ಞಾನಶಕ್ತಿ ಡಿಜಿಟಲ್ಸ್ ಎಂಬ ಸಂಸ್ಥೆಯು ಮಾಡಿದೆ.

ಹಳೆಯಂಗಡಿಯ ಸರಕಾರಿ ಕಾಲೇಜಿನ ಪ್ರಥಮ ಎಂ ಕಾಂ ವಿಭಾಗದಲ್ಲಿ ವ್ಯಾಸಂಗ ನಡೆಸುತ್ತಿರುವಸಂಸ್ಥೆಯ ಅಭಿರಾಮ್ ರವರು ಸತತವಾಗಿ ಸುಮಾರು ಒಂದು ವರ್ಷ ರಥದ ವಿನ್ಯಾಸದ ಬಗ್ಗೆ ಅಭ್ಯಾಸ ಮಾಡಿ, 3 ತಿಂಗಳ ಅವಧಿಯಲ್ಲಿ ಮಾಡೆಲನ್ನು ಪೂರ್ಣಗೋಳಿಸಿದ್ದಾರೆ.

ರಥದ ಜಿಡ್ಡೆ ಹಾಗೂ ರಥಕ್ಕೆ ಬಳಸುವ ಎಲ್ಲಾ ಪರಿಕರದ 3ಡಿ ಮಾಡೆಲ್ ಪ್ರತ್ಯೇಕವಾಗಿ ತಯಾರಿಸಿ, ರಥ ಜೋಡಿಸುವ ರೀತಿಯಲ್ಲಿಯೇ ಅನಿಮಷನ್ ಮಾಡಿದ್ದಾರೆ. ಮಾತ್ರವಲ್ಲದೆ ಬಪ್ಪನಾಡು ದೇವರ ಅಟ್ಟೆ ಇರುವ ಬಲಿ ಮೂರ್ತಿಯನ್ನು ರಚಿಸಿದ್ದಾರೆ.

You may also like