Home » Delhi : ಮುಂಬೈ ದಾಳಿ ಮಾಸ್ಟರ್‌ಮೈಂಡ್‌ ತಹವ್ವೂರ್‌ ರಾಣಾ ಅರೆಸ್ಟ್‌ !! ಈಗ ಹೇಗಿದ್ದಾನೆ ಗೊತ್ತಾ ಈತ?

Delhi : ಮುಂಬೈ ದಾಳಿ ಮಾಸ್ಟರ್‌ಮೈಂಡ್‌ ತಹವ್ವೂರ್‌ ರಾಣಾ ಅರೆಸ್ಟ್‌ !! ಈಗ ಹೇಗಿದ್ದಾನೆ ಗೊತ್ತಾ ಈತ?

0 comments

Delhi: ವಾಣಿಜ್ಯನಗರಿ ಮುಂಬೈ ಮೇಲೆ 2008ರ ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ತಹವ್ವೂರ್‌ ರಾಣಾನನ್ನ (Tahawwur Rana) ಕೊನೆಗೂ ಭಾರತಕ್ಕೆ ಕರೆತರಲಾಗಿದೆ. ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎನ್‌ಐಎ ಆತನನ್ನು ಬಂಧಿಸಿದೆ.

ಹೌದು, 64 ವಯಸ್ಸಿನ ತಹವ್ವೂರ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಮೊನ್ನೆ ಅಮೆರಿಕದ ಲಾಸ್ ಏಂಜಲೀಸ್‌ನಿಂದ ಹೊರಟ ರಾಣಾ ಇದ್ದ ವಿಮಾನ ದೆಹಲಿಯ ಪಾಲಂ ತಾಂತ್ರಿಕ ಪ್ರದೇಶದಲ್ಲಿ ನಿನ್ನೆ ಸಂಜೆ ಇಳಿಯಿತು. ಈ ವೇಳೆ ರಾಣನನ್ನು ಬಂಧಿಸಲಾಯಿತು.

ಪ್ರಾಥಮಿಕ ಔಪಚಾರಿಕತೆಯ ನಂತರ ಆತನನ್ನು ಎನ್‌ಐಎ ಪ್ರಧಾನ ಕಚೇರಿಗೆ ಕರೆದೊಯ್ಯುವ ಸಾಧ್ಯತೆಯಿದೆ. ಉಗ್ರನನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೂ ಹಾಜರುಪಡಿಸಲಾಗುವುದು. ನಂತರ ಭಯೋತ್ಪಾದಕ ರಾಣಾನನ್ನು ದೆಹಲಿಯ ಹೆಚ್ಚಿನ ಭದ್ರತೆ ಕಲ್ಪಿಸಲಾಗಿರುವ ತಿಹಾರ್ ಜೈಲಿನಲ್ಲಿ ಇರಿಸಬಹುದು. ಅಂತಿಮವಾಗಿ ವಿಚಾರಣೆಯನ್ನು ಎದುರಿಸಲು ಮುಂಬೈಗೆ ಸ್ಥಳಾಂತರಿಸಬಹುದು ಎಂದು ಮೂಲಗಳು ತಿಳಿಸಿವೆ.

ಇನ್ನು ತಹವ್ವೂರ್ ರಾಣಾನ ಇಂದಿನ ಫೋಟೋವನ್ನು ಎನ್ಐಎ ರಿಲೀಸ್ ಮಾಡಿದೆ. NIA ಅಧಿಕೃತ ಎಕ್ಸ್​ ಖಾತೆ ಈ ಫೋಟೋ ಬಿಡುಗಡೆ ಮಾಡಿದೆ. ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಇಂದೇ ಹಾಜರುಪಡಿಸಲಾಗಿದೆ. ಇನ್ನೂನ್ಯಾಯಾಲಯದ ಸುತ್ತ ಹೆಚ್ಚಿನ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ.

You may also like