Home » Mumbai: ಟ್ಯೂಷನ್‌ ವಿಷಯಕ್ಕೆ ಜಗಳ: 9ನೇ ಕ್ಲಾಸ್‌ನ ಹುಡುಗ ಮಹಡಿಯಿಂದ ಜಿಗಿದು ಆತ್ಮಹತ್ಯೆ

Mumbai: ಟ್ಯೂಷನ್‌ ವಿಷಯಕ್ಕೆ ಜಗಳ: 9ನೇ ಕ್ಲಾಸ್‌ನ ಹುಡುಗ ಮಹಡಿಯಿಂದ ಜಿಗಿದು ಆತ್ಮಹತ್ಯೆ

0 comments

Mumbai: ಮುಂಬೈನ ಕಂಡಿವಲಿ ಪ್ರದೇಶದಲ್ಲಿ ಒಂದು ದುರಂತ ಘಟನೆ ನಡೆದಿದೆ. ಟ್ಯೂಷನ್‌ ತರಗತಿಗಳಿಗೆ ಹಾಜರಾಗುವ ಕುರಿತು ನಡೆದ ಜಗಳದಲ್ಲಿ ದೂರದರ್ಶನ ನಟ 14 ವರ್ಷದ ಮಗ ಆತ್ಮಹತ್ಯೆಗೈದಿದ್ದಾನೆ. ಈ ಘಟನೆ ಬುಧವಾರ ನಡೆದಿದ್ದು, ಬಾಲಕ ಬಹುಮಹಡಿ ಕಟ್ಟಡದಿಂದ ಹಾರಿದ ಘಟನೆ ನಡೆದಿದೆ.

ಗುಜರಾತಿ ಮತ್ತು ಹಿಂದಿ ದೂರದರ್ಶನ ಧಾರವಾಹಿಗಳಲ್ಲಿ ಕೆಲಸ ಮಾಡಿದ್ದ ನಟ 51 ನೇ ಮಹಡಿಯಲ್ಲಿ ವಾಸ ಮಾಡುತ್ತಿರುವ ವಸತಿ ಸಂಕೀರ್ಣದಲ್ಲಿ ಸಂಜೆ 6 ರ ಸುಮಾರಿಗೆ ಆತ್ಮಹತ್ಯೆ ಮಾಡಿದ್ದಾಗಿ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

9ನೇ ತರಗತಿಯ ವಿದ್ಯಾರ್ಥಿ ಟ್ಯೂಷನ್‌ಗೆ ಹಾಜರಾಗಲು ಹಿಂಜರಿಯುತ್ತಿದ್ದರಿಂದ ತಾಯಿ ಜೊತೆ ಜಗಳವಾಡಿದ್ದ. ಅವನು ಅಪಾರ್ಟ್ಮೆಂಟ್‌ನಿಂದ ಹೊರಗೆ ಬಂದು, ಕೆಲವು ಮಹಡಿ ಇಳಿದು ಹಾರಿದ ಘಟನೆ ನಡೆದಿದೆ. ಇದನ್ನು ನೋಡಿದ ಸಹ ನಿವಾಸಿಯೊಬ್ಬರು ಬಾಲಕನ ತಾಯಿಗೆ ತಿಳಿಸಿದ್ದಾರೆ.

ಕಾಂಡಿವಲಿ ಪೊಲೀಸರು ಅಪಘಾತ ಸಾವಿನ ವರದಿ ದಾಖಲು ಮಾಡಿದ್ದಾರೆ. ತನಿಖೆ ಮುಂದುವರಿದಿದೆ.

You may also like