Home » Mumbai: ವಾಹನ ಸವಾರರಿಗೆ ಗುಡ್ ನ್ಯೂಸ್- ಇನ್ಮುಂದೆ ಈ ವಾಹನಗಳಿಗಿಲ್ಲ ಟೋಲ್ !! ಸರ್ಕಾರದಿಂದ ಹೊಸ ನಿರ್ಧಾರ

Mumbai: ವಾಹನ ಸವಾರರಿಗೆ ಗುಡ್ ನ್ಯೂಸ್- ಇನ್ಮುಂದೆ ಈ ವಾಹನಗಳಿಗಿಲ್ಲ ಟೋಲ್ !! ಸರ್ಕಾರದಿಂದ ಹೊಸ ನಿರ್ಧಾರ

2 comments

Mumbai: ಇನ್ಮುಂದೆ ಈ ಮಹಾನಗರವನ್ನು ಪ್ರವೇಶಿಸುವ ಲಘು ವಾಹನಗಳಿಗೆ ಟೋಲ್ ಇರೋದಿಲ್ಲ. ಈ ಕುರಿತು ಅಲ್ಲಿನ ಸರ್ಕಾರವೇ ಹೊಸ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ.

ಹೌದು, ಮಹಾರಾಷ್ಟ್ರ(Maharastra) ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಲು ಕ್ಷಣಗಣನೆ ಆರಂಭ ಆಗಿರುವ ಹೊತ್ತಲ್ಲೇ ಸಿಎಂ ಏಕನಾಥ ಶಿಂಧೆ ಸಾರಥ್ಯದ ಮಹಾರಾಷ್ಟ್ರ ಸರ್ಕಾರ ಮಾಸ್ಟರ್ ಸ್ಟ್ರೋಕ್ ಪ್ರಯೋಗಿಸಿದೆ! ಮುಂಬೈ(Mumbai) ನಗರ ಪ್ರವೇಶಿಸುವ ವಾಹನಗಳಿಗೆ ಟೋಲ್ ಮನ್ನಾ ಮಾಡಲು ತೀರ್ಮಾನಿಸಿದೆ.

ಅಂದಹಾಗೆ ನಿನ್ನೆ (ಅ.14) ಮಧ್ಯರಾತ್ರಿಯಿಂದ ಲಘು ಮೋಟಾರು ವಾಹನಗಳ ಮೂಲಕ ಮುಂಬೈಗೆ ಉಚಿತ ಟೋಲ್ ಪ್ರವೇಶವನ್ನು ಪಡೆಯಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದೆ.

ಸರ್ಕಾರ ಏನು ಹೇಳಿದೆ?
ಮುಂಬೈ ಟೋಲ್ ನಾಕಾಗಳ ಪೈಕಿ 5 ಟೋಲ್ ಗಳಲ್ಲಿ ಖಾಸಗಿ ಲಘು ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುತ್ತೇವೆ. ಸೋಮವಾರ ರಾತ್ರಿಯಿಂದಲೇ ಈ ನಿಯಮ ಜಾರಿಯಾಗಲಿದ್ದು, ಐದು ಟೋಲ್‌ಗಳ ಮೂಲಕ ಲಘು ವಾಹನಗಳು ಟೋಲ್ ಮುಕ್ತವಾಗಿ ಪ್ರವೇಶಿಸಬಹುದು. ಲಘು ವಾಹನಗಳ ವರ್ಗದಲ್ಲಿ ಕಾರುಗಳು (ಹ್ಯಾಚ್‌ಬ್ಯಾಕ್‌ಗಳು, ಸೆಡಾನ್‌ಗಳು ಮತ್ತು ಎಸ್‌ಯುವಿಗಳು), ಜೀಪ್‌ಗಳು, ವ್ಯಾನ್‌ಗಳು, ಆಟೋ-ರಿಕ್ಷಾಗಳು, ಟ್ಯಾಕ್ಸಿಗಳು, ಡೆಲಿವರಿ ವ್ಯಾನ್‌ಗಳು ಮತ್ತು ಸಣ್ಣ ಟ್ರಕ್‌ಗಳು ಸೇರಿವೆ. ಪ್ರತಿನಿತ್ಯ ಆರು ಲಕ್ಷಕ್ಕೂ ಹೆಚ್ಚು ವಾಹನಗಳು ಮುಂಬೈ ದಾಟುತ್ತಿದ್ದು, ಅದರಲ್ಲಿ ಶೇ.80ರಷ್ಟು ಲಘು ಮೋಟಾರು ವಾಹನಗಳಾಗಿವೆ ಎಂದು ಸರ್ಕಾರ ಹೇಳಿದೆ.

ಚುನಾವಣೆ ದೃಷ್ಟಿಯಿಂದ ಆದೇಶ?
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಲು ಇದೀಗ ಕ್ಷಣಗಣನೆ ಆರಂಭವಾಗಿದೆ. ಇದೇ ವರ್ಷಾಂತ್ಯದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾರರ ಓಲೈಕೆಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಇಂಥಾದ್ದೊಂದು ತೀರ್ಮಾನ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯ ಈ ನಿರ್ಧಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

You may also like

Leave a Comment