Home » ಎಂಪಿ, ಎಂಎಲ್ಎ, ಮಿನಿಸ್ಟರ್ ಬಂದ್ರೆ ಎದ್ದು ನಿಂತ್ಕೊಳ್ಳಿ: ಸರ್ಕಾರಿ ನೌಕರರಿಗೆ ಸೂಚನೆ

ಎಂಪಿ, ಎಂಎಲ್ಎ, ಮಿನಿಸ್ಟರ್ ಬಂದ್ರೆ ಎದ್ದು ನಿಂತ್ಕೊಳ್ಳಿ: ಸರ್ಕಾರಿ ನೌಕರರಿಗೆ ಸೂಚನೆ

0 comments

ಮುಂಬಯಿ: ಜನಪ್ರತಿನಿಧಿಗಳಿಗೆ ಎದ್ದುನಿಂತು ಗೌರವ ಕೊಡಬೇಕು, ಅವರ ಜತೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ಸರಕಾರಿ ಅಧಿಕಾರಿಗಳಿಗೆ ಸೂಚಿಸಿ ಸರಕಾರ ಸುತ್ತೋಲೆ ಹೊರಡಿಸಿದೆ.

ಮಹಾರಾಷ್ಟ್ರ ಸರಕಾರ ಈ ರೀತಿ ಸೂಚನೆ ನೀಡಿದೆ. ಅಲ್ಲದೆ ಜನರಿಂದ ಆಯ್ಕೆಯಾದ ಶಾಸಕ, ಸಂಸದರೊಂದಿಗಿನ ದೂರವಾಣಿ ಸಂಭಾಷಣೆ ನಡೆಸುವ ವೇಳೆ ಕೂಡಾ ಜನರು ಗೌರವ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಇಷ್ಟೇ ಅಲ್ಲದೆ, ಸರಕಾರಿ ಕಾರ್ಯಕ್ರಮಗಳಿಗೂ ಶಿಷ್ಟಾಚಾರ ರೂಪಿಸಲಾಗಿದ್ದು, ಜನಪ್ರತಿನಿಧಿಗಳಿಗೆ ಆಹ್ವಾನ ಕಳಿಸುವುದು, ಆಸನ ವ್ಯವಸ್ಥೆ ಖಚಿತಪಡಿಸುವುದು ಇತ್ಯಾದಿಗಳನ್ನು ಕಡ್ಡಾಯವಾಗಿದೆ. ಯಾರಾದರೂ ನಿಯಮ ಉಲ್ಲಂಘಿಸಿದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸೂಚಿಸಿದ್ದಾಗಿ ವರದಿಯಾಗಿದೆ.

You may also like