Home » Mumtaz Ali ನಾಪತ್ತೆ ಪ್ರಕರಣ; ಮುಳುಗು ತಜ್ಞ ಈಶ್ವರ್‌ ಮಲ್ಪೆ ತಂಡ ಆಗಮನ

Mumtaz Ali ನಾಪತ್ತೆ ಪ್ರಕರಣ; ಮುಳುಗು ತಜ್ಞ ಈಶ್ವರ್‌ ಮಲ್ಪೆ ತಂಡ ಆಗಮನ

0 comments

Mangaluru: ಮಾಜಿ ಶಾಸಕ ಮೊಯ್ದಿನ್‌ ಬಾವಾ ಅವರ ಸೋದರ ನಾಪತ್ತೆಯಾಗಿರುವ ಉದ್ಯಮಿ ಮುಮ್ತಾಜ್‌ ಆಲಿಯವರ ಹುಡುಕಾಟ ಮುಂದುವರಿದಿದ್ದು, ಮುಳುಗುತಜ್ಞ ಈಶ್ವರ ಮಲ್ಪೆ ತಂಡ ಸಹಿತ ಹಲವು ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿದೆ.

ಕೂಳೂರು ಸೇತುವೆಯ ಮೇಲೆ ಕಾರು ಅಪಘಾತದ ರೀತಿಯಲ್ಲಿ ಪತ್ತೆಯಾಗಿದ್ದು, ಶೋಧ ಕಾರ್ಯಾಚಾರಣೆ ತೀವ್ರಗೊಳಿಸಲಾಗಿದೆ.

ಈಶ್ವರ್‌ ಮಲ್ಪೆ ಅವರು ಒಂದು ಹಂತದ ಹುಡುಕಾಟ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ್ದು, ಏಳು ಜನ ನಾವು ಮುಳುಗು ಕಾರ್ಯಾಚರಣೆ ಮಾಡಿದ್ದೇವೆ. ಸೇತುವೆ ಕಾಮಗಾರಿ ನಡೆಯುತ್ತಿರುವ ಕಾರಣ ಕೆಳಗೆ ಕಬ್ಬಿಣದ ಸರಳು, ಸಿಮೆಂಟ್‌ ಚೀಲಗಳಿದ್ದು, ಕೆಳಗೆ ಕತ್ತಲೆ ಇರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಹೇಳಿದರು.

ಇಲ್ಲೇ ಬಿದ್ದಿದ್ದರೆ ಇಲ್ಲೇ ಸಿಗಬೇಕು, ಸಮುದ್ರ ಸೇರಲು ಸಾಧ್ಯವಿಲ್ಲ. ಎಲ್ಲಾ ತಂಡಗಳು ಕಾರ್ಯಾಚರಣೆಯನ್ನು ಮತ್ತೆ ಮುಂದುವರಿಸಿದ್ದೇವೆ. ಅವರು ಜೀವಂತವಾಗಿ ಇರಲಿ ಎಂದು ಆಶಿಸುತ್ತೇವೆ ಎಂದು ಹೇಳಿದರು.

ಸ್ಥಳದಲ್ಲಿ ಮೊಯ್ದಿನ್‌ ಬಾವಾ ಇದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಅಲಿ ಅವರ ಸಹೋದರ ಬಿ.ಎಂ. ಫಾರೂಕ್‌, ಐವನ್‌ ಡಿಸೋಜಾ ಭೇಟಿ ನೀಡಿದ್ದಾರೆ.

You may also like

Leave a Comment