Muniratna: ಮಂಗಳವಾರ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತಿಗಿಳಿದ ಮುನಿರತ್ನ ಅವರು, ನನಗೆ ಜೀವ ಬೆದರಿಕೆ ಇದೆ, ರಕ್ಷಣೆ ಕೊಡಿ, ನಾನು ವಿಧಾನಸೌಧದಿಂದ ಮನೆಗೆ ಹೋಗಲು ಜೀವಕ್ಕೆ ರಕ್ಷಣೆ ಕೊಡಿ ಎಂದು ಬಿಜೆಪಿಯ ಮುನಿರತ್ನ ಸಭಾಧ್ಯಕ್ಷ ಯು.ಟಿ.ಖಾದರ್‌ರನ್ನು ಒತ್ತಾಯ ಮಾಡಿದ ರೀತಿ ಇದು.
ಗುಪ್ತಚರ ಇಲಾಖೆ ಹೆಮಂತ್ ನಿಂಬಾಳ್ಕರ್‌ಗೂ ಮನವಿ ಮಾಡಲಾಗಿದೆ. ರಕ್ಷಣೆ ಭರವಸೆ ನೀಡಿದರೆ ನಾನು ಮನೆಗೆ ಹೋಗುತ್ತೇನೆ ಎಂದು ಆಗ್ರಹ ಮಾಡಿದರು.
ಯಾವ ವಿಷಯದ ಮೇಲೆ ಮಾತನಾಡಬೇಕು ಎನ್ನುವುದಕ್ಕೆ ಮೊದಲು ಬರಹದಲ್ಲಿ ಕೊಡಿ ಎಂದು. ಆಗ ವಿಪಕ್ಷದ ಅಶೋಕ್, ಸುನಿಲಕ್ ಕುಮಾರ್ ಅವರು ಮುನಿರತ್ನ ನೆರವಿಗೆ ಬಂದಿದ್ದಾರೆ. ʼಗನ್‌ಮ್ಯಾನ್ ವಾಪಸ್ ಬಗ್ಗೆ ಮಾತನಾಡುತ್ತಿದ್ದಾರೆ. ಒಬ್ಬ ಶಾಸಕ ಜೀವ ರಕ್ಷಣೆಗೆ ಅಂಗಲಾಚುತ್ತಿದ್ದಾರೆʼ ಎಂದು ಹೇಳಿದರು.
ನಂತರ ಸ್ಪೀಕರ್ ಅವರು ” ಪೊಲೀಸ್ ರಕ್ಷಣೆಗೆ ಬಗ್ಗೆ ಬರಹದಲ್ಲಿ ಕೊಡಿ, ಮಾತನಾಡಲು ಅವಕಾಶ ಕೊಡುತ್ತೇನೆ” ಎಂದು ಹೇಳಿದರು.
