Murder: ಹುಡುಗನಿಗೆ ಆಗಷ್ಟೇ ಮೀಸೆ ಚಿಗುರೊಡೆಯುವ ಕಾಲ ಜೆಸ್ಟ್ 20ವರ್ಷ, ಇತ್ತ ಈಕೆಗೆ ತನ್ನ ಯವ್ವನ ಕಳೆದು ಕೊಳ್ಳುವ ಕಾಲ 35 ವರ್ಷ, ಸದ್ಯ ಇವರಿಬ್ಬರಿಗೆ ಅದು ಹೇಗೋ ಪ್ರೀತಿ ಹುಟ್ಟಿಕೊಂಡಿದೆ. ಕೊನೆಗೆ ಇಬ್ಬರೂ ಹೆಣವಾಗಿ ಸಿಕ್ಕಿದ್ದಾರೆ.
ಹೌದು, ಅಶ್ವಿನಿಗೆ ಮದುವೆಯಾಗಿ ಮಕ್ಕಳಿದ್ದಾರೆ. ಆದರೆ ಕೆಲವು ಕಾರಣಗಳಿಂದ ಪತಿಯಿಂದ ಬೇರ್ಪಟ್ಟು ಕೆಲ ತಿಂಗಳಿಂದ ತವರು ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ತವರು ಮನೆ ಸೇರಿದ ಆಕೆ ರೆಹಮಾನ್ ಎಂಬ ಯುವಕನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಇವರಿಬ್ಬರು ಯಾರಿಗೂ ಕ್ಯಾರೇ ಅನ್ನದೇ ಪ್ರಣಯ ಪಕ್ಷಿಗಳಂತೆ ತಮ್ಮ ಲೋಕದಲ್ಲಿ ಇದ್ದರು, ಆದರೆ ಇದ್ದಕ್ಕಿದ್ದಂತೆ ಇಬ್ಬರ ಶವ ಜಮೀನಿನಲ್ಲಿ ರುಂಡ ಕಾಣದ ಹಾಗೆ ಕಾಣಸಿಕ್ಕಿದೆ.
ಸದ್ಯ ಇವರಿಬ್ಬರೂ ಆದಿಲಾಬಾದ್‌ನಿಂದ ಸೀತಾಗಾಂವ್ಹಾದ ಉಪನಗರದಲ್ಲಿ ಬೆಳೆಗ್ಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಹೊಲದಲ್ಲಿ ಅವರಿಬ್ಬರನ್ನೂ ಕೊಲೆ (Murder) ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಒಟ್ಟಿನಲ್ಲಿ ವಿವಾಹಿತೆ ಜೊತೆ ಜೀವನ ಕಟ್ಟಿಕೊಳ್ಳಬೇಕಿದ್ದ ಆತ ಮಸಣ ಸೇರಿದ್ದ. ಇಬ್ಬರಿಗೂ ತಲೆಯ ಮೇಲೆ ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಹತ್ಯೆಯಲ್ಲಿ ಯಾರ ಕೈವಾಡ ಇದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
