Home » ಹಾಡಹಗಲೇ ಯುವತಿಯ ಬರ್ಬರ ಕೊಲೆ

ಹಾಡಹಗಲೇ ಯುವತಿಯ ಬರ್ಬರ ಕೊಲೆ

0 comments

ಮದುವೆ ನಿಶ್ಚಯವಾಗಿದ್ದ ಯುವತಿಯನ್ನು ದುಷ್ಕರ್ಮಿಯೋರ್ವ ಹಾಡಹಗಲೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಮೃತ ಯುವತಿಯನ್ನು ಅಲ್ಲಿನ ವಿನೋಬ ನಗರದ ನಿವಾಸಿ ಚಾಂದ್‌ ಸುಲ್ತಾನ್(24) ಎಂದು ಗುರುತಿಸಲಾಗಿದೆ. ಯಾವುದೋ ಕಾರಣಕ್ಕೆ ಮನೆಯಿಂದ ಹೊರಗೆ ತೆರಳಿದ್ದ ಈಕೆ ದಾವಣಗೆರೆ ಪಿಜೆ ಬಡಾವಣೆಯ ಚರ್ಚ್ ಬಳಿ ತನ್ನ ಸ್ಕೂಟರ್ ನಲ್ಲಿ ಹೋಗುತ್ತಿರುವ ವೇಳೆ ದುಷ್ಕರ್ಮಿಯೋರ್ವ ಆಕೆಯ ಸ್ಕೂಟರ್ ಅನ್ನು ಅಡ್ಡಗಟ್ಟಿದ್ದಾನೆ. ಅಲ್ಲದೆ, ಯುವತಿಯನ್ನು ಸ್ಕೂಟರ್ ನಿಂದ ಕೆಳಗೆ ಬೀಳಿಸಿ, ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ಘಟನೆ ವೀಕ್ಷಿಸಿದ ಸ್ಥಳಿಯರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ತಕ್ಷಣವೇ ತೀವ್ರ ಗಾಯಗೊಂಡಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಎಂಟು ತಿಂಗಳ ಹಿಂದೆ ಈ ಯುವತಿಗೆ ಹರಿಹರದ ಯುವಕನ ಜೊತೆಗೆ ವಿವಾಹ ನಿಶ್ಚಯವಾಗಿತ್ತು ಎನ್ನಲಾಗಿದೆ. ಇದನ್ನು ವಿರೋಧಿಸಿ ದುಷ್ಕರ್ಮಿ ಈ ಕೃತ್ಯ ನಡೆಸಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ಸದ್ಯ ದಾವಣಗೆರೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ನಡೆಸುತ್ತಿದ್ದಾರೆ.

You may also like

Leave a Comment