Home » ರೂಮಿನ ಮಂಚ, ದಿಂಬು, ಕಾರ್ಪೆಟ್ ಕಂಪ್ಲೀಟ್ ಚಿತ್ರಣ ಬದಲಾದುದನ್ನು ಮಹಜರು ವೇಳೆ ಗುರುತಿಸಿದ ಇಬ್ಬರು ಹುಡುಗಿಯರು – ಸಾಕ್ಷ್ಯ ನಾಶ ಮಾಡಿದ್ರಾ ಮುರುಘಾ ಶ್ರೀ?

ರೂಮಿನ ಮಂಚ, ದಿಂಬು, ಕಾರ್ಪೆಟ್ ಕಂಪ್ಲೀಟ್ ಚಿತ್ರಣ ಬದಲಾದುದನ್ನು ಮಹಜರು ವೇಳೆ ಗುರುತಿಸಿದ ಇಬ್ಬರು ಹುಡುಗಿಯರು – ಸಾಕ್ಷ್ಯ ನಾಶ ಮಾಡಿದ್ರಾ ಮುರುಘಾ ಶ್ರೀ?

0 comments

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಾಕ್ಷ್ಯ ನಾಶ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಪೋಕ್ಸೋ ಪ್ರಕರಣದಿಂದಾಗಿ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿರುವ ಶ್ರೀಗಳು ಸಾಕ್ಷ್ಯನಾಶದ ಅಪಾದನೆ ಎದುರಿಸುತ್ತಿದ್ದಾರೆ.

ಡಿವೈಎಸ್ ಪಿ ಅನಿಲ್ ಕುಮಾರ್ ನೇತೃತ್ವದ ತನಿಖಾ ತಂಡ ಮಠ ಮತ್ತು ವಿದ್ಯಾರ್ಥಿ ನಿಲಯದಲ್ಲಿ ಸ್ಥಳ ಮಹಜರು ನಡೆಸಿದೆ. ಈ ಮಹಜರು ವೇಳೆ ಸ್ಫೋಟಕ ವಿಷಯ ಬಯಲಾಗಿದೆ ಎನ್ನಲಾಗಿದೆ.

ಮಹಜರು ವೇಳೆ, ಮಹಜರು ಪ್ರಕ್ರಿಯೆಯಂತೆ  ಇಬ್ಬರು ವಿದ್ಯಾರ್ಥಿನಿಯರನ್ನು ಮುರುಘಾ ಶ್ರೀಗಳಿದ್ದ ಕೋಣೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಶ್ರೀಗಳು ಬಳಸುತ್ತಿದ್ದ ಕೋಣೆಯ ಸಂಪೂರ್ಣ ಬದಲಾಗಿರುವುದನ್ನು ಆ ಹುಡುಗಿಯರು ಗಮನಿಸಿ ಹೇಳಿದ್ದಾರೆ. ಮಂಚ, ದಿಂಬು, ಕಾರ್ಪೆಟ್ ಎಲ್ಲವೂ, ಕಂಪ್ಲೀಟ್ ಚಿತ್ರಣ ಬದಲಾಗಿದೆ ಎಂದು ತಿಳಿಸಿದ್ದಾರೆ. ಈ ಇಬ್ಬರ ಹೇಳಿಕೆಯಿಂದ ಶ್ರೀಗಳ ವಿರುದ್ಧವೇ ಪೊಲೀಸರಿಗೆ ಈಗ ಶಂಕೆ ಬಲವಾಗಿ ಶುರುವಾಗಿದೆ.

ಇಂದು ಬೆಳಗ್ಗೆ ಶ್ರೀಗಳನ್ನು ಮಠಕ್ಕೆ 10 ಗಂಟೆಗೆ ಕರೆದೊಯ್ಯಲಿರುವ ಪೊಲೀಸರು ಸ್ಥಳ ಮಹಜರು ಮಾಡುವ ಸಾಧ್ಯತೆಯಿದೆ. ಇಂದಿಗೆ 5 ದಿನ ಕಸ್ಟಡಿ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಸೋಮವಾರ ಶ್ರೀಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಗುತ್ತದೆ. ನಂತರ ಕೋರ್ಟು ನಿರ್ದೇಶನದಂತೆ ಮತ್ತೆ ಪೊಲೀಸ್ ಗೆ ಒಪ್ಪಿಸುವ ಸಾಧ್ಯತೆ ಇದೆ.

You may also like

Leave a Comment