Elon Musk: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಎಲಾನ್ ಮಸ್ಕ್ ಈಗಾಗಲೇ 4 ಪತ್ನಿಯರು 330 ಹಾಗೂ 14 ಮಕ್ಕಳ ಹೊಂದಿದ್ದು ಹಳೇ ಸುದ್ದಿ. ಈಗ ಜಪಾನ್‌ನ ಶ್ರೀಮಂತ ಮಹಿಳೆ ಯೊಬ್ಬರಿಗೆ ಅವರು ಆಕೆಯ ಕೋರಿಕೆ ಮೇರೆಗೆ ತಮ್ಮ ವೀರ ದಾನ ಮಾಡಿದ್ದಾರೆ ಎಂದು ವರದಿಯೊಂದು ಹೇಳಿದೆ.
ಇದೇ ವೇಳೆ ಕ್ರಿಪ್ಟೋ ಕರೆನ್ಸಿ ಇನ್‌ಫ್ಲುಯೆನ್ಸರ್ ಟಿಫಾನಿ ಫಾಂಗ್ ಎಂಬ ಮಹಿಳೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಂಪರ್ಕಿಸಿದ ಅವರು ತನ್ನ ಮಕ್ಕಳನ್ನು ಹೆರಲು ಕೋರಿಕೆ ಸಲ್ಲಿಸಿದ್ದರು. ಆದರೆ ಆಕೆ ಇದನ್ನು ನಿರಾಕರಿಸಿದ್ದಳು ಎಂದು ಗೊತ್ತಾಗಿದೆ. ಇದಲ್ಲದೆ ಅನಧಿಕೃತವಾಗಿ ಆ್ಯಪ್ಲೆಕ್ಷೇರ್ ಎಂಬ ಮಹಿಳೆಯಿಂದ ಮಗು ಪಡೆದಿದ್ದ ಮಸ್ಕ್, ಆ ಮಗುವಿನ ತಂದೆ ತಾನೆಂದು ಹೇಳದಂತೆ 15 ಲಕ್ಷ ಡಾಲರ್ ಒನ್ ಟೈಂ ಪೇಮೆಂಟ್ ಹಾಗೂ ಮಾಸಿಕ 1 ಲಕ್ಷ ಡಾಲರ್ ಆಮಿಷ ಒಡ್ಡಿದ್ದರು ಎಂದೂ ಮಾಧ್ಯಮವೊಂದು ವರದಿ ಮಾಡಿದೆ
