Home » Donald Trump: ಟ್ರಂಪ್‌ ಡೆಸ್ಕ್‌ಗೆ ಸಿಂಬಳ ಒರೆಸಿದ ಮಸ್ಕ್‌ ಪುತ್ರ!

Donald Trump: ಟ್ರಂಪ್‌ ಡೆಸ್ಕ್‌ಗೆ ಸಿಂಬಳ ಒರೆಸಿದ ಮಸ್ಕ್‌ ಪುತ್ರ!

0 comments

Donald Trump: ಅಮೆರಿಕದ ಅಧ್ಯಕ್ಷರ ಕಚೇರಿಯಲ್ಲಿ ಐಸಿಹಾಸಿಕ ರೆಸೂಲ್ಯೂಟ್‌ ಡೆಸ್ಕ್‌ಗೆ ಉದ್ಯಮಿ ಎಲಾನ್‌ ಮಸ್ಕ್‌ ಪುತ್ರ ಸಿಂಬಳ ಒರೆಸಿದ್ದು, ಹೀಗಾಗಿ 145 ವರ್ಷ ಹಳೆಯ ಡೆಸ್ಕನ್ನು ನವೀಕರಿಸುವಂತೆ ಡೊನಾಲ್ಡ್‌ ಟ್ರಂಪ್‌ ಆದೇಶ ನೀಡಿರುವ ಕುರಿತು ವರದಿಯಾಗಿದೆ.

ಮಸ್ಕ್‌ 4 ವರ್ಷದ ಪುತ್ರ ಎಕ್ಸ್‌ ಇತ್ತೀಚೆಗೆ ಟ್ರಂಪ್‌ ಕಚೇರಿಗೆ ಬಂದಿದ್ದು, ಮಗು ತನ್ನ ಮೂಗಿನಿಂದ ಸಿಂಬಳ ತೆಗೆದು ಡೆಸ್ಕ್‌ಗೆ ಒರೆಸಿದ್ದ. ಹೀಗಾಗಿ ಟ್ರಂಪ್‌ ಡೆಸ್ಕ್‌ನ ನವೀಕರಣಕ್ಕೆ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ವೈಟ್‌ಹೌಸ್‌ನಲ್ಲಿರುವ 7 ಡೆಸ್ಕ್‌ಗಳಲ್ಲಿ ಮಾಜಿ ಅಧ್ಯಕ್ಷ ಜಾರ್ಜ್‌ ಬುಷ್‌ ಬಳಕೆ ಮಾಡುತ್ತಿದ್ದ ಡೆಸ್ಕ್‌ ಅನ್ನು ಟ್ರಂಪ್‌ ತಾತ್ಕಾಲಿಕವಾಗಿ ಬಳಸುತ್ತಿದ್ದಾರೆ ಎನ್ನಲಾಗಿದೆ.

ಟ್ರಂಪ್‌ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ನವೀಕರಣ ಒಂದು ಮಹತ್ವದ ಕೆಲಸವಾಗಿದ್ದು, ತಾತ್ಕಾಲಿಕವಾಗಿ ಡೆಸ್ಕ್‌ ಬದಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಟ್ರಂಪ್‌ ಮಸ್ಕ್‌ ಪುತ್ರನ ಹೆಸರು ಮತ್ತು ನವೀಕರಣಕ್ಕೆ ಕಾರಣ ಎಂದು ಎಲ್ಲೂ ತಿಳಿಸಿಲ್ಲ. ಹಾಗೆ ನೋಡಿದರೆ ಟ್ರಂಪ್‌ ಅವರಿಗೆ ಸೂಕ್ಷ್ಮ ಜೀವಿಗಳ ಕುರಿತು ಭೀತಿ ಇದೆ. ಈ ಕುರಿತು ಅವರು ಈ ಹಿಂದೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಈ ಕಾರಣದಿಂದಲೇ ಅವರು ಡೆಸ್ಕ್‌ ನವೀಕರಣಕ್ಕೆ ಆದೇಶ ನೀಡಿದ್ದಾರೆ ಎಂದು ನ್ಯೂಯಾರ್ಕ್‌ ಪೋಸ್‌ ವರದಿ ಮಾಡಿದೆ.

ವೈಟ್‌ಹೌಸ್‌ನ ಓವಲ್‌ ಆಫೀಸ್‌ನಲ್ಲಿರುವ ರೆಸೂಲ್ಯೂಟ್‌ ಡೆಸ್ಕ್‌ ಬಹಳ ಪ್ರಸಿದ್ಧವಾಗಿದೆ. ಇದನ್ನು ಎಚ್‌ಎಂಎಸ್‌ ರೆಸೊಲ್ಯೂಟ್‌ ಹಡಗಿನ ಅವಶೇಷಗಳಿಂದ ಮಾಡಲಾಗಿದೆ. 1980 ರಲ್ಲಿ ರಾಣಿ ವಿಕ್ಟೋರಿಯಾ ಇವರು ಅಮೆರಿಕ ಅಧ್ಯಕ್ಷ ರುದರ್ಪೊರ್ಡ್‌ ಬಿ. ಹೇಯ್ಸ್‌ ಅವರಿಗೆ ಈ ಡೆಸ್ಕನ್ನು ಉಡುಗೊರೆಯಾಗಿ ನೀಡಿದ್ದರು. ಇದರ ಹೊರತಾಗಿ ಸಿ ಆಂಡ್‌ ಓ ಡೆಸ್ಕ್‌, ಥಿಯೋಡರ್‌ ರೂಸ್‌ವೆಲ್ಡ್‌ ಡೆಸ್ಕ್‌, ದಿ ಜಾನ್ಸನ್‌ ಡೆಸ್ಕ್‌, ದಿ ಹೂವರ್‌ ಡೆಸ್ಕ್‌ ಮತ್ತು ದಿ ವಿಲ್ಸನ್‌ ಡೆಸ್ಕ್‌ಗಳು ವೈಟ್‌ ಹೌಸ್‌ನಲ್ಲಿದೆ. ಹಾಗೂ ಅಧ್ಯಕ್ಷರು ತಮಗೆ ಬೇಕಾದ ಡೆಸ್ಕನ್ನು ಆಯ್ಕೆ ಮಾಡಿಕೊಳ್ಳಬಹುದು.

You may also like