Home » Hijab Ban: ಹಿಜಾಬ್ ಬ್ಯಾನ್ ಮಾಡಿದ ಮುಸ್ಲಿಂ ರಾಷ್ಟ್ರ ಕಜಕಿಸ್ತಾನ – ಪಬ್ಲಿಕ್ ಪ್ಲೇಸ್ ಗಳಲ್ಲಿ ಧರಿಸಿದ್ರೆ 5 ಲಕ್ಷ ದಂಡ !!

Hijab Ban: ಹಿಜಾಬ್ ಬ್ಯಾನ್ ಮಾಡಿದ ಮುಸ್ಲಿಂ ರಾಷ್ಟ್ರ ಕಜಕಿಸ್ತಾನ – ಪಬ್ಲಿಕ್ ಪ್ಲೇಸ್ ಗಳಲ್ಲಿ ಧರಿಸಿದ್ರೆ 5 ಲಕ್ಷ ದಂಡ !!

0 comments
Hijab Ban

Hijab Ban: ಮುಸ್ಲಿಂ ಬಾಹುಳ್ಯದ ದೇಶವಾಗಿರುವ ತಜಿಕಿಸ್ತಾನವು(Thajakisthan) ಇದೀಗ ಹಿಜಾಬ್ ನಿಷೇಧಿಸಲು(Hijab Ban) ಮುಂದಾಗಿದ್ದು, ಶೀಘ್ರದಲ್ಲಿಯೇ ಈ ಕಾನೂನು ಜಾರಿಯಾಗುವ ಸಾಧ್ಯತೆ ಇದೆ. ದೇಶದ ಸಂಸತ್‌ನ ಮೇಲ್ಮನೆಯಲ್ಲಿ ಜೂನ್ 19ರಂದು ಹಿಜಾಬ್ ನಿಷೇಧ ಸಂಬಂಧಿ ವಿಧೇಯಕವನ್ನು ಅಂಗೀಕರಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ; ಕೊಲೆಗೆ ಸಂಚು ಕೃತ್ಯ, ಪವಿತ್ರಾ ಗೌಡ ನೇರ ಭಾಗಿ- ರಿಮ್ಯಾಂಡ್‌ ಕಾಪಿ

ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಲು ಅವಕಾಶ ನಿರಾಕರಿಸಿದ ಘಟನೆ ಕರ್ನಾಟಕ(Karnataka) ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಗದ್ದಲ ಏರ್ಪಟ್ಟು ಭಾರೀ ಚರ್ಚೆ ಆಗಿತ್ತು. ಆದರೀಗ ಅಚ್ಚರಿ ಎಂಬಂತೆ ಮುಸ್ಲಿಂ ರಾಷ್ಟ್ರಗಳೇ ಹಿಜಾಬ್ ನಿಷೇಧಕ್ಕೆ ಮುಂದಾಗಿವೆ. ಅಂತೆಯೇ ಇದೀಗ ಸುಮಾರು 1 ಕೋಟಿ ಜನಸಂಖ್ಯೆ ಹೊಂದಿರುವ ತಜಕಿಸ್ತಾನದಲ್ಲಿ ಶೇ.96ರಷ್ಟು ಜನರು ಮುಸ್ಲಿಮರಿದ್ದಾರೆ. ಆದರೆ ಹಾಲಿ ಆಡಳಿತದಲ್ಲಿರುವ ಅಧ್ಯಕ್ಷ ಎಮೋಮಲಿ ರೆಹಮಾನ್‌(Emomali Rahaman) ಸರ್ಕಾರವು, ತಜಕಿಸ್ತಾನವನ್ನು ಜಾತ್ಯತೀತ ದೇಶ ಎಂದು ಜಗತ್ತಿನ ಮುಂದೆ ತೆರೆದಿಡುವ ಭಾಗವಾಗಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ತಜಿಕಿಸ್ತಾನದ ಸಂಸತ್‌ನ ಮೇಲ್ಮನೆಯಾದ ಮಜಿಲಿ ಮಿಲ್ಲಿಯಲ್ಲಿ ಸ್ಪೀಕರ್ ರುಸ್ತಮ್ ಎಮೋಮಲಿ(Rustham Emomali) ಅವರ ಅಧ್ಯಕ್ಷತೆಯಲ್ಲಿ ನಡೆದ 18ನೇ ಅಧಿವೇಶನದ ವೇಳೆ ವಿಧೇಯಕಕ್ಕೆ ಅನುಮೋದನೆ ದೊರಕಿದೆ. ಹಿಜಾಬ್ ಅನ್ನು ‘ಅನ್ಯ ಲೋಕದ ಉಡುಪು’ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಸಂಸತ್ತಿನ ಉಭಯ ಸದನಗಳಲ್ಲೂ ಅಂಗೀಕಾರವಾದ ಮಸೂದೆ ಅನ್ವಯ, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್‌ ಸೇರಿದಂತೆ ಯಾವುದೇ ಇಸ್ಲಾಮಿಕ್‌ ಧಾರ್ಮಿಕ ವಸ್ತ್ರ ಧರಿಸುವಂತಿಲ್ಲ. ಒಂದು ವೇಳೆ ಧರಿಸಿದರೆ 3ರಿಂದ 5 ಲಕ್ಷ ರು.ವರೆಗೆ ದಂಡ ಕಟ್ಟಬೇಕಾಗುತ್ತದೆ.

Kodi Mutt Shri: ದೇಶದಲ್ಲಿ ಸಂಭವಿಸಲಿದೆ ‘ಪಂಚಘಾತಕಗಳು’ – ಶಾಕಿಂಗ್ ಭವಿಷ್ಯ ನುಡಿದ ಕೋಡಿ ಶ್ರೀ !!

You may also like

Leave a Comment