Bengaluru : ಬೆಂಗಳೂರಿನಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಕೆಲ ಮುಸ್ಲಿಂ ಯುವಕರು ಹಿಂದೂ ಯುವಕನನ್ನು ಅಡ್ಡಗಟ್ಟಿ ಪ್ರಶ್ನಿಸಿರುವ ಘಟನೆ ನಡೆದಿದೆ.
ಹೌದು, ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೆಲ ಮುಸ್ಲಿಂ ಯುವಕರು ಬೈಕ್ ನಲ್ಲಿ ಬಂದು ಅಡ್ಡಗಟ್ಟಿ ನೈತಿಕ ಪೊಲೀಸ್ ಗುರಿ ನಡೆಸಿದ್ದಾರೆ ಎನ್ನಲಾಗಿದೆ.
ಬೈಕನ್ನು ಅಡ್ಡ ಗಟ್ಟಿದ ಮುಸ್ಲಿಂ ಯುವಕರು ಬಳಿಕ ತಮ್ಮ ಭಾಷೆಯಲ್ಲಿ ಯುವತಿಗೆ ನಾನಾ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಹಿಂದೂ ಯುವಕ ನನಗೆ ತಡವಾಗುತ್ತಿದೆ ಎಂದು ಹೇಳಿದರು ಕೂಡ ಬಿಡದೆ ನೈತಿಕ ಪೊಲೀಸ್ ಗಿರಿ ತೋರಿಸಿದ್ದಾರೆ. ಸುಮಾರು ಅರ್ಧಗಂಟೆಗು ಹೆಚ್ಚು ಕಾಲ ರಸ್ತೆಯ ನಡುವೆಯೇ ಇಬ್ಬರನ್ನೂ ಎಲ್ಲಿಂದ ಬಂದಿದ್ದು, ನೀವು ಯಾರು? ನಿಮ್ಮ ಅಪ್ಪನಿಗೆ ಕರೆ ಮಾಡಿ ಎಂದು ಪ್ರಶ್ನಿಸಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
