1
Kolara: ಇಂದು ಲವ್ ಮ್ಯಾರೇಜ್ ಗಳು ಹೆಚ್ಚಾಗುತ್ತಿವೆ. ಆದರೂ ಕೆಲವೊಮ್ಮೆ ನಿಯತ್ತಿನಿಂದ ಪ್ರೀತಿಸಿದವರಿಗೆ ಜಾತಿ, ಧರ್ಮಗಳು ಅಡ್ಡ ಬಂದು ಆ ಪ್ರೀತಿ ಅಂತ್ಯ ಕಾಣದೆ ಮುರಿದು ಬೀಳುತ್ತದೆ. ಈ ನಡುವೆ ಹಿಂದೂ (Hindu) ಯುವಕ ಹಾಗೂ ಮುಸ್ಲಿಂ (Muslim) ಯುವತಿ ಪರಸ್ಪರ ಪ್ರೀತಿಸಿ ವಿವಾಹವಾಗಿರುವ ಪ್ರಸಂಗ ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚೌಡದೇನಹಳ್ಳಿ ಗ್ರಾಮದಲ್ಲಿ ಮನೆಯವರ ತೀವ್ರ ವಿರೋಧದ ನಡುವೆ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಮನೆಯವರ ತೀವ್ರ ವಿರೋಧದ ನಡುವೆಯೂ ದಲಿತ ಸಂಘಟನೆಗಳ ಸಹಕಾರದೊಂದಿಗೆ ವಿವಾಹವಾಗಿದ್ದಾರೆ.
