Tumakuru : ನಿನ್ನೆ ದಿನ ಇಡೀ ದೇಶದ ಮುಸ್ಲಿಂ ಬಾಂಧವರು ಈದ್-ಅಲ್-ಫಿತರ್ ಅನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಮಸೀದಿಗಳಿಗೆ ತೆರಳಿ ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸಿದ್ದಾರೆ. ಈ ಹಬ್ಬ ಕೆಲವು ಕಡೆ ಹಿಂದೂ ಮುಸ್ಲಿಮರ ಭಾವೈಕ್ಯತೆಗೂ ಸಾಕ್ಷಿಯಾಗಿದೆ. ಆದರೆ ಇದರ ಮಧ್ಯೆ ಕೆಲ ಮುಸ್ಲಿಂ ಯುವಕರು ದೇವಾಲಯದಲ್ಲಿ ಭಕ್ತಿಗೀತೆಯ ಸೌಂಡ್ ಕಡಿಮೆ ಮಾಡುವಂತೆ ಅವಾಜ್ ಹಾಕಿರುವ ಘಟನೆ ನಡೆದಿದೆ.
ಹೌದು, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಲಿಂಗೇನಹಳ್ಳಿಯಲ್ಲಿ ನಡೆದಿದೆ. ನಿನ್ನೆ ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಭಕ್ತಿಗೀತೆ ಹಾಕಲಾಗಿತ್ತು. ಇದರಿಂದ ಕೋಪ ಮುಸ್ಲಿಂ ಯುವಕನೋರ್ವ ಬಂದು ಸೌಂಡ್ ಕಡಿಮೆ ಮಾಡಿ ಎಂದು ಅವಾಜ್ ಹಾಕಿದ್ದಾನೆ. ಬಳಿಕ ಇನ್ನೂ ಕೆಲ ಮುಸ್ಲಿಂ ಯುವಕರು ದೇವಸ್ಥಾನದ ಬಳಿ ಬಂದು ಅವಾಜ್ ಹಾಕಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
