Gadaga: ಯುವಕನಿಗೆ ಯುವತಿಯಿಂದಲೇ ಲವ್ ಜಿಹಾದ್ ಆಗಿರುವ ಆರೋಪ ಕೇಳಿ ಬಂದಿದೆ. ಗದಗ ಜಿಲ್ಲೆಯಲ್ಲಿ ಹಿಂದೂ ಯುವಕನೋರ್ವ ಮುಸ್ಲಿಂ ಯುವತಿಯ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿರುವ ವಿಚಿತ್ರ ಘಟನೆ ನಡೆದಿದೆ.
ವಿಶಾಲ್ ಕುಮಾರ್ ಎಂಬ ಹಿಂದೂ ಯುವಕ ತಹಸೀನ್ ಎಂಬ ಯುವತಿಯನ್ನು ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಜೂನ್ 5ರಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಯುವತಿ ಒಪ್ಪಿದ್ದಳು. ಆದರೆ ಈಗ ನಿರಾಕರಿಸುತ್ತಿದ್ದಾಳೆ. ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿತ್ತು.
ಆದರೆ ಈಗ ತಹಸೀನ್ ತಾಯಿ ಬೇಗಂ ಮುಸ್ಲಿಂ ಧರ್ಮದಂತೆ ವಿವಾಹಬೇಕು. ಕೊರಮ ಸಮುದಾಯ ಬಿಟ್ಟು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ತಹಸೀನ್ ಕೂಡಾ ಜಮಾತ್‌ಗೆ ಹೋಗುವಂತೆ ಒತ್ತಾಯಿಸಿದ್ದಾಳೆ ಎಂದು ಯುವಕ ಆರೋಪಿಸಿದ್ದಾಳೆ. ಮತಾಂತರ ಆಗದಿದ್ದರೆ ರೇಪ್ ಕೇಸ್ ಹಾಕುವುದಾಗಿ ಬೆದರಿಕೆಯೊಡ್ಡಿರುವ ಕುರಿತು ವರದಿಯಾಗಿದೆ. ಈ ಕುರಿತು ಯುವಕ ಹಿಂದೂ ಸಂಘಟನೆ ಬಳಿ ನೋವು ಕೊಂಡಿದ್ದಾರೆ. ಯುವಕ ಗದಗ ಶಹರ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾನೆ.
ಇದನ್ನೂ ಓದಿ: Dragon Fruit : ದಿಢೀರ್ ಕುಸಿದ ‘ಡ್ರ್ಯಾಗನ್ ಫ್ರೂಟ್’ ದರ – ಹಣ್ಣು ಬೆಳೆದ ರೈತರ ಕಂಗಾಲು
