Marriage: ಮುಸ್ಲಿಂ ಯುವಕನೊಬ್ಬ ತಾನು ಹಿಂದು ಎಂದು ಸುಳ್ಳು ಹೇಳಿ ಹಿಂದೂ ಯುವತಿಯನ್ನು ಮದುವೆಯಾಗಲು ಹೊರಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಯುವಕ ಬೆಲ್ಹಾ ಮಾಯಿ ದೇವಾಲಯದಲ್ಲಿ ಯುವತಿಯನ್ನು ವಿವಾಹವಾಗುತ್ತಿರುವ ಸಂದರ್ಭದಲ್ಲಿ ದೇವಾಲಯದ ಅರ್ಚಕ ಮಂಗಳ ಪ್ರಸಾದ್ ಅವರಿಗೆ ಅನುಮಾನವಾಗಿದೆ. ಹೆಸರು ಕೇಳಿದಾಗ ಅನುಮಾನ ಹೆಚ್ಚಾಗಿದ್ದು, ಕೂಡಲೇ ಅರ್ಚಕರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ಪ್ರಯಾಗ್‌ರಾಜ್ ಮೂಲದ ಮಲಾಕಾದ ಶಾಲಿನಿ ಪ್ರತಾಪ್ ಎಂದು ತನ್ನ ಹೆಸರು ಯುವತಿ ಹೇಳಿದ್ದಾಳೆ. ಯುವ ಮಲಾಕಾದ ರಾಜೀವ್ ಎಂದು ಹೇಳಿದ್ದಾನೆ. ಯುವಕನ ಆಧಾರ್ ಕಾರ್ಡ್ ಕೇಳಿದಾಗ ನನ್ನ ಹೆಸರು ಮತ್ಲೂಬ್ ಆಲಂ ಎಂದು ಬಾಯ್ಬಿಟ್ಟಿದ್ದಾನೆ. ಅಲ್ಲದೇ ತಾನು ಪ್ರಯಾಗ್ ರಾಜ್‌ನ ಚಂದಾಪುರ ಪೊಲೀಸ್ ಠಾಣೆಯ ನಿವಾಸಿ ಎಂದು ಹೇಳಿದ್ದಾನೆ.
ಈತ ಹಿಂದೂ ಎಂದು ಹೇಳಿ ಬಲವಂತದಿಂದ, ಒತ್ತಡ ಹಾಕಿ ಮದುವೆಯಾಗುತ್ತಿದ್ದ ಎಂದು ಯುವತಿ ಹೇಳಿದ್ದಾಳೆ. ಆರೋಪಿ ಯುವಕನನ್ನು ಬಂಧನ ಮಾಡಲಾಗಿದೆ. ಹಿಂದೂ ಸಂಘಟನೆ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ಮಾಡಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಮಾಡಿರುವ ಕುರಿತು ವರದಿಯಾಗಿದೆ.
