Dharawada: ಮನೆಗೆ ನುಗ್ಗಿ ಆರ್ ಎಸ್ ಎಸ್ ಮುಖಂಡನ ಮೇಲೆ ನಾಲ್ವರು ಮುಸ್ಲಿಂ ಯುವಕರು ಹಲ್ಲೆ ಮಾಡಿದ ಪ್ರಕರಣ ಒಂದು ಧಾರವಾಡದಲ್ಲಿ ಬೆಳಕಿಗೆ ಬಂದಿದೆ.
ಧಾರವಾಡ (Dharwad) ನಗರದ ಹಳೆ ತಹಸೀಲ್ದಾರ್ ಕಚೇರಿ ಓಣಿಯಲ್ಲಿ ಈ ಘಟನೆ ನಡೆದಿದೆ. ಸಿರೀಶ್ ಬಳ್ಳಾರಿ ಹಲ್ಲೆಗೊಳಗಾದ ಆರ್ಎಸ್ಎಸ್ ಮುಖಂಡ. ಸಿಗರೇಟ್ ಸೇದುವಾಗ ದೂರಕ್ಕೆ ನಿಲ್ಲಿ ಎಂದು ಹೇಳಿದ್ದೆ ಈ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ.
ಹೌದು, ಯುವಕರು ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ವೇಳೆ, ಸಿರೀಶ್ ಬಳ್ಳಾರಿಯವರು ದೂರಕ್ಕೆ ಹೋಗಿ ಸಿಗರೇಟು ಸೇದುವಂತೆ ಹೇಳಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ನಾಲ್ವರು ಮುಸ್ಲಿಂ ಯುವಕರು, ಸಿರೀಶ್ ಬಳ್ಳಾರಿಯವರ ಮನೆಯೊಳಗೆ ಹೊಕ್ಕು ಹಲ್ಲೆ ಮಾಡಿದ್ದಾರೆ. ಇದರಿಂದ, ಸಿರೀಶ್ ಬಳ್ಳಾರಿಯವರ ಕೈ ಹಾಗೂ ಮುಖಕ್ಕೆ ತೀವ್ರ ಗಾಯವಾಗಿದೆ. ಸಿರೀಶ್ ಬಳ್ಳಾರಿಯವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈಗ ಧಾರವಾಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಗಳನ್ನು ಬಂಧಿಸುವಂತೆ ಹಿಂದೂಪರ ಸಂಘಟನೆಗಳಿಂದ ಒತ್ತಾಯಿಸಿದ್ದು, ನೂರಾರು ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿದ್ದಾರೆ.
