Mysore University : ಮೈಸೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದಾಗಿ ಹೊಸ ಯೋಜನೆ ಯನ್ನು ಜಾರಿಗೆ ತಂದಿದ್ದು ಇನ್ನು ಮುಂದೆ ವಿಶ್ವವಿದ್ಯಾಲಯದ ಕೆಲವು ಸೇವೆಗಳನ್ನು ಆನ್ಲೈನ್ ನಲ್ಲಿ ನೀಡಲು ತೀರ್ಮಾನಿಸಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಮನೆಯಿಂದಲೇ ಆನ್‌ಲೈನ್ ಮೂಲಕ ಪ್ರಮಾಣ ಪತ್ರ ಪಡೆಯಲು ಮೈಸೂರು ವಿಶ್ವವಿದ್ಯಾಲಯ ಅವಕಾಶ ಕಲ್ಪಿಸಿಕೊಟ್ಟಿದೆ. ಮುಂದಿನ ವಾರದಿಂದ ಈ ಸೇವೆ ನೀಡಲು ವಿವಿ ಪರೀಕ್ಷಾಂಗ ವಿಭಾಗ ತೀರ್ಮಾನಿಸಿದೆ.
ಇನ್ಮುಂದೆ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲೇ ಎಲ್ಲಾ ದಾಖಲಾತಿಯನ್ನು ಅಪ್ಲೋಡ್ ಮಾಡಿ, ಹಣವನ್ನೂ ಅಲ್ಲಿಯೇ ಜಮಾ ಮಾಡಿ ವಾರದೊಳಗೆ ಪ್ರಮಾಣಪತ್ರ ಪಡೆಯಬಹುದು. ಇದರಿಂದ ವಿವಿಗೆ ಅಲೆಯುವುದೂ ತಪ್ಪುತ್ತದೆ. ಡಿಜಿಟಲ್ ವ್ಯವಸ್ಥೆಯೂ ಸಾಕಾರಗೊಳ್ಳುತ್ತದೆ.
ಈ ಕುರಿತು ವಿಶ್ವವಿದ್ಯಾಲಯದ ಕುಲ ಸಚಿವ ಪ್ರೊ.ಎನ್.ನಾಗರಾಜ ಪ್ರತಿಕ್ರಿಯಿಸಿ ಎಷ್ಟೋ ವಿದ್ಯಾರ್ಥಿಗಳು ವಿವಿಧ ಬಗೆಯ ಪ್ರಮಾಣ ಪತ್ರ ಪಡೆಯಲು ದೂರದೂರಿನಿಂದ ಬರುತ್ತಿದ್ದರು. ಅವರಿಗೆ ಅನುಕೂಲವಾಗಲಿ ಎಂದು ಇನ್ಮುಂದೆ ಪ್ರಮಾಣ ಪತ್ರ ಪಡೆಯಲು ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಮನೆಯಲ್ಲಿಕುಳಿತುಕೊಂಡೆ ತಮಗೆ ಬೇಕಾದ ಪ್ರಮಾಣಪತ್ರಗಳನ್ನು ಪಡೆಯಬಹುದು ಎಂದಿದ್ದಾರೆ.
