ಸಮುದ್ರದಲ್ಲಿ ಸಾಕಷ್ಟು ಜೀವಿಗಳು ವಾಸಿಸುತ್ತದೆ. ತಿಳಿದಿರುವುದಕ್ಕಿಂತ ಹೆಚ್ಚಾಗಿಯೇ ನಿಗೂಢ ಜೀವಿಗಳಿವೆ. ನಾವು ಸಾಮಾನ್ಯವಾಗಿ ಮೀನು ಕೇಳಿದ್ದೇವೆ ಇದು ಯಾವುದು ಭೂತ ಮೀನು. ಹೆಸರು ಕೇಳಿದರೆನೇ ಆಶ್ಚರ್ಯದ ಜೊತೆಗೆ ಕುತೂಹಲ ಕೂಡ ಉಂಟಾಗುತ್ತದೆ. ಇನ್ನೂ ಈ ಜೀವಿಯ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದು ನೀರಿನೊಳಗೆ ತೇಲುತ್ತಿದ್ದು, ಆರಂಭದಲ್ಲಿ ಇದು ಪಾಲಿಥೀನ್‌ನಂತೆ ಕಂಡರೂ ನಂತರ ಅದು ಜೀವಂತ ಜೀವಿ ಎಂದು ತಿಳಿದುಬಂದಿದೆ. ಅದರ ಇಡೀ ದೇಹವು ಪಾರದರ್ಶಕವಾಗಿತ್ತು. ಮುಂಭಾಗದಲ್ಲಿ ಕೆಂಪು ಬಣ್ಣದ ವಸ್ತುವಿನ ಹಾಗೆ ಗೋಚರಿಸುತ್ತದೆ. ಅದು ಬಹುಶಃ ಅದರ ಮೆದುಳು ಎಂದು ಹೇಳಲಾಗುತ್ತಿದೆ. ಇದನ್ನು ನೋಡಿದ ಹಲವರು ಇದು ಬೇರೆ ಗ್ರಹದ ಜೀವಿ ಎಂದಿದ್ದಾರೆ. ಸಮುದ್ರದಲ್ಲಿ ಕಂಡ ಈ ಅಪರೂಪದ ಜೀವಿ ನೋಡುಗರನ್ನು ಆಶ್ಚರ್ಯಗೊಳಿಸಿದೆ. ಈ ಜೀವಿಯ ಕಣ್ಣು, ಮೂಗು, ದೇಹದ ಅಂಗಾಂಗಗಳು ಎಲ್ಲಿದೆ ಎಂಬುವುದು ತಿಳಿಯುವುದಿಲ್ಲ.
ಕ್ಯಾಲಿಫೋರ್ನಿಯಾದ ಪಶ್ಚಿಮ ಲಾಸ್ ಏಂಜಲೀಸ್ ನ ಟೊಪಾಂಗಾ ಬೀಚ್‌ನಲ್ಲಿ ಖ್ಯಾತ ಡೈವರ್ ಆಂಡಿ ಕ್ರೆಚಿಯೊಲೊ ಅವರು ಈ ಅಪರೂಪದ ಜೀವಿಯನ್ನು ಕಂಡಿದ್ದಾರೆ. ನಂತರ ಅವರು ಈ ಜೀವಿಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅವರು ಹೇಳಿದ ಪ್ರಕಾರ, “ನಾನು ಟೊಪಾಂಗಾ ಬೀಚ್ ನಲ್ಲಿ ಈಜುವಾಗ ಅಲ್ಲೇ ಒಂದು ನಿಗೂಢ ಜೀವಿ ಕಂಡಿತು. ನೋಡಲು ವಿಶಿಷ್ಟವಾಗಿತ್ತು. ಅದರ ದೇಹಕ್ಕೆ ಬಾಯಿ, ಬಾಲದಂತಹ ಭಾಗವಿದ್ದರೂ ಇಡೀ ದೇಹ ಖಾಲಿ ಇದ್ದಂತೆ ತೋರುತ್ತಿತ್ತು” ಎಂದಿದ್ದಾರೆ. ಅಷ್ಟೇ ಅಲ್ಲದೆ ಅವರು ಅದಕ್ಕೆ ‘ಘೋಸ್ಟ್ ಫಿಶ್’ ಎಂದು ಹೆಸರು ನೀಡಿದ್ದಾರೆ.
ಸ್ಯಾನ್ ಡಿಯಾಗೋದಲ್ಲಿರುವ ಸ್ಕ್ರಿಪ್ಸ್ ಇನ್‌ಸ್ಟಿಟ್ಯೂಷನ್ ಆಫ್ ಓಷಿಯಾನೋಗ್ರಫಿಯ ಸಹಾಯಕ ಪ್ರಾಧ್ಯಾಪಕ ಮೊಯಿರಾ ಡೆಸಿಮಾ ಅವರ ಪ್ರಕಾರ, ಇದು ಬೇರೆ ಗ್ರಹದ ಜೀವಿಯಲ್ಲ. ಬದಲಾಗಿ ಭೂಮಿಯ ಮೇಲಿರುವ ಜೀವಂತ ಜೀವಿ. ಅದನ್ನು ಥೀಟಿಸ್ ಎಂದು ಗುರುತಿಸಲಾಗಿದೆ. ಈ ಜೀವಿಗಳ ಮೂಲವು 1800 ರ ದಶಕದ ಆರಂಭದಲ್ಲಿಯೇ ಕಾಣಿಸಿಕೊಂಡಿವೆ ಎಂದಿದ್ದಾರೆ.
ಪ್ರೊಫೆಸರ್ ಮೊಯಿರಾ ಪ್ರಕಾರ, ಈ ಜೀವಿಯನ್ನು ಸಾಗರಗಳ ವ್ಯಾಕ್ಯೂಮ್ ಕ್ಲೀನರ್ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ ಇದು ಮನುಷ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಆದ್ದರಿಂದ ಇದು ಅವರಿಗೆ ಯಾವುದೇ ರೀತಿಯಲ್ಲಿ ಹಾನಿಯನ್ನುಂಟು ಮಾಡುವುದಿಲ್ಲ. ಇದು ಸಮುದ್ರದ ನೀರಿನಲ್ಲಿನ ಫೈಟೊಪ್ಲಾಂಕ್ಟನ್, ಮೈಕ್ರೋಝೂಪ್ಲಾಂಕ್ಟನ್ (ಬ್ಯಾಕ್ಟೀರಿಯಾ) ತಿನ್ನುತ್ತದೆ. ಇದರಿಂದ ಸಮುದ್ರದ ನೀರು ಸ್ವಚ್ಛವಾಗುತ್ತದೆ ಎಂದು ಹೇಳಿದರು. ಹಾಗಾದರೆ ಈ ‘ಘೋಸ್ಟ್ ಫಿಶ್’ ಸಮುದ್ರವನ್ನು ಸ್ವಚ್ಛಮಾಡುತ್ತದೆ ಎಂಬುದು ಸ್ಪಷ್ಟವಾಯಿತು.
ಇದು ಮೊದಲನೆಯದಲ್ಲ ಇದಕ್ಕೂ ಮೊದಲು ಸಿಕ್ಕ ಮೀನಿನ ತಲೆ ಸಂಪೂರ್ಣ ಪಾರದರ್ಶಕವಾಗಿತ್ತು. ಅದನ್ನು ಬ್ಯಾರೆಲೆಯೆ ಎಂದು ಕರೆಯಲಾಗುತ್ತದೆ. ಇದಲ್ಲದೆ, ವಿಜ್ಞಾನಿಗಳು ಇದನ್ನು ಸ್ಪೂಕ್ ಫಿಶ್ ಎಂದೂ ಕರೆಯುತ್ತಾರೆ. ಇದು ಬಹಳ ಅಪರೂಪ ಮತ್ತು ಕೆಲವೇ ಜನರು ಇದನ್ನು ನೋಡುತ್ತಾರೆ. ಇದು ಸಾಮಾನ್ಯವಾಗಿ ಆಳವಾದ ನೀರಿನಲ್ಲಿ ವಾಸಿಸಲು ಇಷ್ಟಪಡುತ್ತದೆಯಂತೆ. ನೀರಿನ ಅಡಿಯಲ್ಲಿ ಕತ್ತಲೆಯಲ್ಲಿಯೂ ಅವು ಹೊಳೆಯುತ್ತಲೇ ಇರುತ್ತವೆ. ಸಣ್ಣ ಮೀನುಗಳು ಅವುಗಳ ಕಣ್ಣುಗಳ ಹೊಳಪಿನಿಂದ ಆಕರ್ಷಿತವಾಗುತ್ತವೆ. ಜೊತೆಗೆ ಅವುಗಳನ್ನು ಸುಲಭವಾಗಿ ಬೇಟೆಯಾಡುತ್ತವೆ ಎಂದು ತಿಳಿದುಬಂದಿದೆ. ಇನ್ನೂ ನೋಡಲು ತುಂಬಾ ವಿಚಿತ್ರವಾಗಿರುವ ‘ಘೋಸ್ಟ್ ಫಿಶ್’ ನ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
