3
Chikkamagaluru: ನಿರಂತರ ಮಳೆಯು ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿದ್ದ ಪರಿಣಾಮ ನಾಡಕಚೇರಿ ಕುಸಿದು ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.
ಐದು ಲಕ್ಷ ವೆಚ್ಚದಲ್ಲಿ ಒಂದು ವರ್ಷದ ಹಿಂದಷ್ಟೇ ನಾಡಕಚೇರಿಯನ್ನು ದುರಸ್ತಿ ಮಾಡಲಾಗಿತ್ತು. ಅಧಿಕಾರಿಗಳು, ಜನರು ಕಚೇರಿಯಲ್ಲಿದ್ದಾಗಲೇ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ನಡೆದಿಲ್ಲ. ಕಚೇರಿಯಲ್ಲಿದ್ದ ದಾಖಲೆಗಳು ಮಣ್ಣಿನಲ್ಲಿ ನಾಶವಾಗಿದೆ. ವಾರದಿಂದ ಸುರಿದ ಮಳೆಯಿಂದಾಗಿ ನಾಡಕಚೇರಿ ಕಟ್ಟಡ ತೇವಗೊಂಡು ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
