Home » ನೈತಿಕ ಪೊಲೀಸ್‌ಗಿರಿ | ಐದು ಮಂದಿ ಪೊಲೀಸರ ವಶಕ್ಕೆ

ನೈತಿಕ ಪೊಲೀಸ್‌ಗಿರಿ | ಐದು ಮಂದಿ ಪೊಲೀಸರ ವಶಕ್ಕೆ

by Praveen Chennavara
0 comments

ಮಂಗಳೂರು: ಪೊಲೀಸ್ ಅಧಿಕಾರಿಯೊಬ್ಬರ ಸಮಕ್ಷಮವೇ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎನ್‌ಐಟಿಕೆ ಸುರತ್ಕಲ್ ಟೋಲ್‌ಗೇಟ್ ಬಳಿ ಆದಿತ್ಯವಾರ ಸಂಜೆ ವೇಳೆಯಲ್ಲಿ ಬೊಲೆರೋ ವಾಹನದಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳನ್ನು ಹಲವು ಯುವಕರು ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿದ್ದರು. ಈ ವಾಹನದ ಹಿಂದೆಯೆ ನಗರ ಸಂಚಾರಿ ಪೊಲೀಸ್ ಇನ್‌ಸ್ಪೆಕ್ಟರ್ ಕೂಡಾ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಹಿಂದು ಸಂಘಟನೆಯ ಯುವಕರು ಬೊಲೆರೋ ಅಡ್ಡಗಟ್ಟಿದಾಗ ಅಧಿಕಾರಿ ಹಲ್ಲೆ ತಡೆಯಲು ಯತ್ನಿಸಿದ್ದ ವಿಡಿಯೋ ವೈರಲ್ ಆಗಿತ್ತು.

ವಿಡಿಯೋ ವೈರಲ್ ಬೆನ್ನಲ್ಲೇ ಐವರು ಯುವಕರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ನಡೆಸಿದ್ದರು. ದೇರಳಕಟ್ಟೆಯ ಕಾಲೇಜೊಂದರ ವಿದ್ಯಾರ್ಥಿನಿಯರು ಅನ್ಯಕೋಮಿನ ವಿದ್ಯಾರ್ಥಿಗಳೊಂದಿಗೆ ತಿರುಗಾಡುತ್ತಿದ್ದ ಅನುಮಾನದ ಮೇಲೆ ಈ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.

ವಾಹನದಲ್ಲಿ ಹಿಂದು ಹುಡುಗಿಯರಿಲ್ಲದಿದ್ದರೂ ತಪ್ಪು ಮಾಹಿತಿ ಮೇಲೆ ವಾಹನದ ಮೇಲೆ ದಾಳಿ ನಡೆಸಿರುವುದಾಗಿಯೂ ಹೇಳಲಾಗಿದೆ.

You may also like

Leave a Comment