Home » Nalin Kumar kateel : ಸಿದ್ದರಾಮಯ್ಯ ಅವರುಕೊರೊನಾ ಲಸಿಕೆ ಪಡೆದರೆ ಮಕ್ಕಳಾಗಲ್ಲ ಎಂದು ಹೇಳಿದರು – ನಳಿನ್ ಕುಮಾರ್ ಕಟೀಲು

Nalin Kumar kateel : ಸಿದ್ದರಾಮಯ್ಯ ಅವರು
ಕೊರೊನಾ ಲಸಿಕೆ ಪಡೆದರೆ ಮಕ್ಕಳಾಗಲ್ಲ ಎಂದು ಹೇಳಿದರು – ನಳಿನ್ ಕುಮಾರ್ ಕಟೀಲು

0 comments

ಬೆಳಗಾವಿ ಜಿಲ್ಲೆಯ ಕಾಗವಾಡದ ಕೆಂಪವಾಡದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಸಮಾರಂಭದಲ್ಲಿ ಮಾತನಾಡುತ್ತಾ ಅವರು, ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ಸಿದ್ದರಾಮೋತ್ಸವಕ್ಕೆ 75ಕೋಟಿ ಖರ್ಚು ಮಾಡಿದರು. ಆ ಹಣ ಎಲ್ಲಿಂದ ಬಂತು, ಭ್ರಷ್ಟಾಚಾರದ ಪರ್ಸೆಂಟೇಜ್‌ನಲ್ಲಿ ಬದುಕುವವರು ಕಾಂಗ್ರೆಸ್‌ನವರು ನಾವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

“ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಸಿದ್ರಾಮಣ್ಣ ಅವರ ಇತಿಹಾಸ ನೋಡಿದರೆ ಶ್ರೀಮಂತ ಕುಟುಂಬದಿಂದ ಬಂದಿಲ್ಲ. ಆದರೂ ಸಹ ಅಷ್ಟೊಂದು ಹಣ ಹೇಗೆ ಖರ್ಚು ಮಾಡಿದ್ದಾರೆ. ಬಿಜೆಪಿಯ ವಿರುದ್ಧದ ಯಾವುದಾದರೂ ದಾಖಲಾತಿ ಇದ್ದರೆ ಸಿದ್ರಾಮಣ್ಣ ಬಿಡುಗಡೆ ಮಾಡಲಿ” ಎಂದು ವಾಗ್ದಾಳಿ ನಡೆಸಿದರು.

ಎಲ್ಲರಿಗೂ ಗೊತ್ತಿರುವ ಹಾಗೆ, ದೇಶದಲ್ಲಿ ಕೊರೊನಾ ಲಸಿಕೆ ಕ್ರಾಂತಿ ಮಾಡಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಲಸಿಕೆಯಲ್ಲೂ ರಾಜಕಾರಣ ಮಾಡುತ್ತಿದೆ. ಇದೇ ಸಿದ್ರಾಮಣ್ಣ ಲಸಿಕೆ ಪಡೆಯಬೇಡಿ ಮಕ್ಕಳಾಗಲ್ಲ ಅಂತ ಹೇಳಿದ್ದರು. ಲಸಿಕೆ ಪಡೆಯಬೇಡಿ ಎಂದಿದ್ದ ಅವರೇ ಲಸಿಕೆ ಪಡೆದರು. ಇನ್ನೂ ರಾತ್ರಿ ಸಮಯದಲ್ಲಿ ರಾಹುಲ್ ಗಾಂಧಿ ಕೂಡ ಲಸಿಕೆ ಪಡೆದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು.

You may also like

Leave a Comment