Home » Nallur vs Badamakan: ನಲ್ಲೂರು ಮಠ ವರ್ಸಸ್‌ ಬಡಾಮಕಾನ್‌ ತೆರವು ವಿವಾದ- ಜಿಲ್ಲಾ ವಕ್ಫ್‌ ಅಧಿಕಾರಿ ಅಮಾನತು

Nallur vs Badamakan: ನಲ್ಲೂರು ಮಠ ವರ್ಸಸ್‌ ಬಡಾಮಕಾನ್‌ ತೆರವು ವಿವಾದ- ಜಿಲ್ಲಾ ವಕ್ಫ್‌ ಅಧಿಕಾರಿ ಅಮಾನತು

0 comments

Nallur vs Badamakan: ಕೋರ್ಟ್‌ ಆದೇಶವಿದೆ ಎಂದು ಸ್ಥಳೀಯ ಆಡಳಿತದ ಗಮನಕ್ಕೆ ತರದೆ ಮಠದ ಜಾಗವನ್ನು ಮಸೀದಿ ಸದಸ್ಯರು ತೆರವು ಮಾಡಿದ ಪ್ರಕರಣಕ್ಕೆ ಕುರಿತು ಜಿಲ್ಲಾ ವಕ್ಫ್‌ ಅಧಿಕಾರಿ ಸೈಯದ್‌ ಸತ್ತಾರ್‌ ಷಾ ಹುಸೇನ್‌ರನ್ನು ಅಮಾನತು ಮಾಡಲಾಗಿದೆ. ವಕ್ಫ್‌ ಅಧಿಕಾರಿ ಸೇರಿ 14 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ರಾಜ್ಯ ವಕ್ಫ್‌ ಬೋರ್ಡ್‌ ಸಿಇಓ ಜೀಲಾನಿ ಮೊಕಾಶಿಯವರು ಚಿಕ್ಕಮಗಳೂರು ಜಿಲ್ಲಾ ವಕ್ಫ್‌ ಅಧಿಕಾರಿಯನ್ನು ಅಮಾನತು ಮಾಡಿ ಆದೇ ಹೊರಡಿಸಿದ್ದಾರೆ.

ಮುಸ್ಲಿಂ ಸಮುದಾಯದವರು ಮಾ.5 ರಂದು ಜಿಲ್ಲೆಯ ಹನುಮಂತಪ್ಪ ವೃತ್ತದ ಬಳಿಯ ನಲ್ಲೂರು ಮಠದ ವಿವಾದಿತ ಜಾಗದಲ್ಲಿ ಏಕಾಏಕಿ ಹೋಟೆಲ್‌, ಅಂಗಡಿಗಳನ್ನು ತೆರವು ಮಾಡಿದ್ದರು.

You may also like