Home » Tirupati: ತಿರುಮಲ ಕಲ್ಯಾಣ ಮಂಟಪದಲ್ಲಿ ಮುಸ್ಲಿಂ ವ್ಯಕ್ತಿಯಿಂದ ನಮಾಜ್

Tirupati: ತಿರುಮಲ ಕಲ್ಯಾಣ ಮಂಟಪದಲ್ಲಿ ಮುಸ್ಲಿಂ ವ್ಯಕ್ತಿಯಿಂದ ನಮಾಜ್

0 comments

Tirupati : ತಿರುಪತಿ ತಿರುಮಲ ಕಲ್ಯಾಣ ಮಂಟಪದ ಬಳಿ ವ್ಯಕ್ತಿಯೋರ್ವ ಸುಮಾರು 10 ನಿಮಿಷಗಳಿಗೂ ಹೆಚ್ಚು ಕಾಲ ನಮಾಜ್ ಮಾಡಿರುವ ಆರೋಪ ಕೇಳಿಬಂದಿದೆ. ಈ ಕುರಿತಾದ ವಿಡಿಯೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು, ಮಂಟಪದ ಬಳಿ ವ್ಯಕ್ತಿಯೋರ್ವ ಹಜರತ್ ಟೋಪಿ ಎಂದು ಹೇಳಲಾಗುತ್ತಿರುವುದನ್ನು ಧರಿಸಿ ಸುಮಾರು 10 ನಿಮಿಷಗಳಿಗೂ ಹೆಚ್ಚು ಕಾಲ ನಮಾಜ್ ಮಾಡಿದ್ದಾನೆ. ಈತ ಕಾರಿನಲ್ಲಿ ಬಂದು ಬೇಕಂತಲೇ ಈ ರೀತಿ ನಡತೆ ತೋರಿದ್ದಾನೆ ಎಂದು ಆರೋಪಿಸಲಾಗಿದೆ. ವಿಡಿಯೋದಲ್ಲಿ ಕೂಡ ಇದೇ ರೀತಿ ಕಾಣಬಹುದು. ನಮಾಜ್ ಮಾಡಿದ ವ್ಯಕ್ತಿಯ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ ಎಂದು ವರದಿಯಾಗಿದೆ.

ತಿರುಮಲ ತಿರುಪತಿ ದೇವಸ್ಥಾನಗಳಲ್ಲಿ ಕೆಲಸ ಮಾಡುತ್ತಿರುವ ಧಾರ್ಮಿಕೇತರ ನೌಕರರನ್ನು ವರ್ಗಾವಣೆ ಮಾಡಲು ಮಂಡಳಿಯು ಈಗಾಗಲೇ ನಿರ್ಧರಿಸಿದೆ. ತಿರುಮಲ ಬೆಟ್ಟಕ್ಕೆ ಬರುವ ವಾಹನಗಳ ಮೇಲೆ ಇತರ ಧರ್ಮಗಳ ಚಿಹ್ನೆಗಳಿದ್ದರೂ ಸಹ ಅವುಗಳನ್ನು ಅನುಮತಿಸಲಾಗಲ್ಲ. ತಿರುಮಲ ಬೆಟ್ಟದಲ್ಲಿ ಅನ್ಯಧರ್ಮೀಯರ ಫೋಟೋಗಳನ್ನು, ಇತರ ಧರ್ಮದ ಜನ ಪ್ರಾರ್ಥನೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಹೀಗಿರುವಾಗ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಮುಸ್ಲಿಂ ಎನ್ನಲಾದ ವ್ಯಕ್ತಿಯು ನಮಾಜ್ ಮಾಡಿದ್ದು, ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದಾರೆ ಎಂದು ಶ್ರೀವಾರಿಯ ಕೆಲ ಭಕ್ತರು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

You may also like