Home » Namaz in Schools: ಅದೊಂದು ಶಾಲೆಯಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ನಮಾಜ್ ಅಧ್ಯಯನ ?!

Namaz in Schools: ಅದೊಂದು ಶಾಲೆಯಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ನಮಾಜ್ ಅಧ್ಯಯನ ?!

0 comments
Namaz in Schools

Namaz in Schools: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಮಕ್ಕಳಿಗೆ ನಮಾಜ್ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡಲಾಗುತ್ತಿದೆ. ಮುಸ್ಲಿಂ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿನಿಯರಿಗೆ (Namaz in Schools)ನಮಾಜ್‌ ಅಭ್ಯಾಸ ಮಾಡಿಸುತ್ತಿದ್ದಾರೆ. ನಮಾಜ್ ಅಭ್ಯಾಸ ಮಾಡುತ್ತಿರುವವರಲ್ಲಿ ಹಿಂದೂ ವಿದ್ಯಾರ್ಥಿನಿಯರೂ ಇದ್ದಾರೆ. ಇದು ಉತ್ತರ ಪ್ರದೇಶದ ನಿಜವಾದ ‘ದಿ ಕೇರಳ ಸ್ಟೋರಿ’, ‘ಇದು ಲವ್‌ ಜಿಹಾದ್’ ಎಂಬ ವಿವರ ಇರುವ ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ.

ಹೌದು, ಕೆಂಪು ಮತ್ತು ಬಿಳಿ ಸಮವಸ್ತ್ರದಲ್ಲಿರುವ ಹುಡುಗಿಯರನ್ನು ತೋರಿಸುವ ವೈರಲ್ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿರುವ ಶಾಲೆಯೊಂದರಲ್ಲಿ ಹಿಂದೂ ಹುಡುಗಿಯರು ನಮಾಜ್ ಮಾಡಲು ತರಬೇತಿ ಪಡೆಯುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಪ್ರಸಾರ ಮಾಡಲಾಗುತ್ತಿದೆ.

ಮಕ್ಕಳು ಮಂಡಿಯೂರಿ ಕುಳಿತು, ನೆಲಕ್ಕೆ ನಮಸ್ಕರಿಸುತ್ತಿರುವ ದೃಶ್ಯವು ಆ ವಿಡಿಯೊದಲ್ಲಿ ಇದೆ. ಈ ವಿಡಿಯೊ ಟ್ವಿಟರ್, ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೆಯಾಗಿದೆ. ಆದರೆ, ಇದು ತಿರುಚಲಾದ ವಿಡಿಯೊ ಮತ್ತು ತಪ್ಪು ಮಾಹಿತಿ ಎಂದು ಸಾಬೀತು ಆಗಿದೆ.

ಮಾಹಿತಿ ಪ್ರಕಾರ ‘ಇದು ಉತ್ತರ ಪ್ರದೇಶದ ಬಾಗ್‌ಪತ್‌ನ ಶಾಲೆಯೊಂದರಲ್ಲಿ ಚಿತ್ರೀಕರಿಸಲಾದ ವಿಡಿಯೊ. ಹಿಂದೂ ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ನಮಾಜ್‌ ಹೇಳಿಕೊಡಲಾಗುತ್ತದೆ ಎಂದು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆದರೆ, ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಸರ್ವಧರ್ಮ ಸಮನ್ವಯ ಗೀತನೃತ್ಯವನ್ನು ನಡೆಸಲು ಉದ್ದೇಶಿಸಲಾಗಿತ್ತು. ಅದರಲ್ಲಿ ಎಲ್ಲಾ ಧರ್ಮಗಳ ಪ್ರಾರ್ಥನಾ ವಿಧಾನಗಳನ್ನು ತೋರಿಸಲಾಗಿತ್ತು. ಆ ನೃತ್ಯದ ಅಭ್ಯಾಸದ ವಿಡಿಯೋ ಅದು.

ನಿಜವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಪೂರ್ಣ ಪ್ರಮಾಣದಲ್ಲಿ ಇಲ್ಲ. ವಿದ್ಯಾರ್ಥಿನಿಯರು ಎಲ್ಲಾ ಸ್ವರೂಪದ ಪ್ರಾರ್ಥನೆಗಳನ್ನು ಮಾಡುತ್ತಿರುವ ದೃಶ್ಯಗಳು ಪೂರ್ಣ ವಿಡಿಯೋದಲ್ಲಿ ಇವೆ. ಈ ಬಗ್ಗೆ ದೂರು ದಾಖಲಾದ ನಂತರ ಶಾಲಾ ಆಡಳಿತ ಮಂಡಳಿಯು, ಗೀತನೃತ್ಯವನ್ನು ರದ್ದು ಮಾಡಿತ್ತು. ಆದರೆ ಕೆಲವರು ವಿಡಿಯೊವನ್ನು ಕತ್ತರಿಸಿ, ನಮಾಜ್‌ ಹೇಳಿಕೊಡಲಾಗುತ್ತಿದೆ ಎಂದು ಸುಳ್ಳುಸುದ್ದಿ ಹರಡಿದ್ದಾರೆ ಎಂದು ಆ ವರದಿಗಳಲ್ಲಿ ವಿವರಿಸಲಾಗಿದೆ’

 

 

 

 

ಇದನ್ನು ಓದಿ: Bangalore: ಪ್ರವಾಸಕ್ಕೆ ತೆರಳೋ ಮುನ್ನ ಬರೋಬ್ಬರಿ 400 ಕೋಟಿ ಮೌಲ್ಯದ ಆಸ್ತಿ ವಿಲ್​​ ಬರೆದ ಬೆಂಗಳೂರು ಉದ್ಯಮಿ!! ಯಾರ್ಯಾರಿಗೆ, ಯಾಕೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ! 

 

 

 

 

You may also like

Leave a Comment