Home » Narendra modi: ಆರ್‌ಎಸ್‌ಎಸ್‌ನಿಂದ ನನ್ನ ಜೀವನದ ಉದ್ದೇಶ ಕಂಡುಕೊಂಡಿದ್ದೇನೆ: ನರೇಂದ್ರ ಮೋದಿ

Narendra modi: ಆರ್‌ಎಸ್‌ಎಸ್‌ನಿಂದ ನನ್ನ ಜೀವನದ ಉದ್ದೇಶ ಕಂಡುಕೊಂಡಿದ್ದೇನೆ: ನರೇಂದ್ರ ಮೋದಿ

by ಕಾವ್ಯ ವಾಣಿ
0 comments

Narendra modi: ಪ್ರಧಾನಿ ನರೇಂದ್ರ ಮೋದಿ (Narendra modi) ಲೆಕ್ಸ್ ಫ್ರಿಡ್‌ಮನ್‌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿ ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ಜಗತ್ತಿನಲ್ಲಿ ಇಲ್ಲ. ಆರ್‌ಎಸ್‌ಎಸ್ ಸಂಸ್ಥೆಯಿಂದ ನಾನು ಜೀವನದ ಸಾರ ಮತ್ತು ಮೌಲ್ಯಗಳನ್ನು ಕಲಿತಿದ್ದೇನೆ. ನಾನು ನನ್ನ ಜೀವನದ ಉದ್ದೇಶ ಕಂಡುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಬಾಲ್ಯದಲ್ಲಿ ಆರ್‌ಎಸ್‌ಎಸ್‌ ಕೂಟಗಳಲ್ಲಿ ಭಾಗವಹಿಸುವುದು ಸಂತೋಷವಾಗುತ್ತಿತ್ತು. ಆಗಲೂ ನನ್ನ ಮನಸ್ಸಿನಲ್ಲಿ ಯಾವಾಗಲೂ ಒಂದು ಗುರಿ ಇತ್ತು. ಅದರಂತೆ ದೇಶಕ್ಕೆ ಉಪಯೋಗವಾಗುವುದನ್ನು ಮಾಡಲು ‘ಸಂಘ’ ನನಗೆ ಕಲಿಸಿದೆ. ಈ ವರ್ಷ ಆರ್‌ಎಸ್‌ಎಸ್ 100 ವರ್ಷಗಳನ್ನು ಪೂರೈಸಿದೆ ಎಂಬುದು ಹೆಮ್ಮೆ ಎಂದು ಶ್ಲಾಘಿಸಿದರು. ಆರ್‌ಎಸ್‌ಎಸ್‌ಗಿಂತ ದೊಡ್ಡ ‘ಸ್ವಯಂಸೇವ ಸಂಘ’ ಜಗತ್ತಿನಲ್ಲಿ ಇಲ್ಲ. ಆರ್‌ಎಸ್‌ಎಸ್‌ನ ಕಾರ್ಯವನ್ನು ಅರ್ಥಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ನಮ್ಮ ವೈದಿಕ ಸಂತರು ಮತ್ತು ಸ್ವಾಮಿ ವಿವೇಕಾನಂದರು ಏನನ್ನು ಕಲಿಸಿದರೋ ಅದೇ ರೀತಿ ‘ಸಮಾಜ ಸೇವೆಯೇ ದೇವರ ಸೇವೆ’ ಎಂದು ಸಂಘ ಕಲಿಸುತ್ತದೆ ಎಂದು ಆರ್‌ಎಸ್‌ಎಸ್ ನ ಬಗ್ಗೆ ಹೇಳಿದ್ದಾರೆ.

You may also like