Home » Dharmasthala: ಧರ್ಮಸ್ಥಳ ಸಂಘದಲ್ಲಿ ಧರ್ಮವೇ ಕಾಣೆ, ಸಾಲಕ್ಕೆ 40% ಬಡ್ಡಿ’ – ಗಂಭೀರ ಆರೋಪ ಮಾಡಿದ ಮಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ

Dharmasthala: ಧರ್ಮಸ್ಥಳ ಸಂಘದಲ್ಲಿ ಧರ್ಮವೇ ಕಾಣೆ, ಸಾಲಕ್ಕೆ 40% ಬಡ್ಡಿ’ – ಗಂಭೀರ ಆರೋಪ ಮಾಡಿದ ಮಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ

315 comments

Dharmasthala: ಧರ್ಮಸ್ಥಳ ಪ್ರಭುತ್ವದ ವಿರುದ್ದ ಮೊದಲ ಬಾರಿಗೆ ಸಾರ್ವಜನಿಕವಾಗಿ ಶಾಸಕರೊಬ್ಬರು ದನಿ ಎತ್ತಿದ್ದಾರೆ. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಇದೀಗ ಗಂಭೀರ ಆರೋಪ ಮಾಡಿದ್ದು, ಹೆಸರಿಗಷ್ಟೇ ಅದು ಧರ್ಮಸ್ಥಳ, ಅದರಲ್ಲಿ ಧರ್ಮವೇ ಇಲ್ಲ. ಅಲ್ಲಿನ ಸಂಘದಲ್ಲಿ ಕೊಟ್ಟ ಸಾಲಕ್ಕೆ ಬಡವರಿಂದ ಶೇ 40 ರಷ್ಟು ಬಡ್ಡಿ ವಸೂಲಿ ಮಾಡುತ್ತಾರೆ ಎಂದು ಹೇಳಿದ್ದಾರೆ. ಧರ್ಮಸ್ಥಳ ಪ್ರಭುತ್ವ ಪೋಷಿತ ಸಂಘದ ವಿರುದ್ಧ ರಾಜ್ಯದ ಹಲವಾರು ಕಡೆ ನಡೆಯುತ್ತಿರುವ ಹೋರಾಟದ ಸಂದರ್ಭದಲ್ಲಿ ಶಾಸಕರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ಧರ್ಮದ ಕೆಲಸವೇ ಇಲ್ಲ. ಅವರು ಕೊಟ್ಟ ಸಾಲಕ್ಕೆ ಬಡವರಿಂದ ಶೇ 40ರಷ್ಟು ಬಡ್ಡಿ ವಸೂಲಿ ಮಾಡುತ್ತಾರೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಸಂಘವು ಮಹಿಳಾ ಸಂಘಗಳಿಗೆ ಸಾಲ ನೀಡಿ ಶೇಕಡಾ 40 ರಷ್ಟು ಬಡ್ಡಿ ವಸೂಲಿ ಮಾಡುವ ಮೂಲಕ ಗ್ರಾಮೀಣ ಭಾಗದ ಮಹಿಳೆಯರನ್ನು ಶೋಷಣೆ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.

ಹೆಸರಿಗಷ್ಟೇ ಅದು ಧರ್ಮಸ್ಥಳ ಸಂಘ. ಅಲ್ಲಿ ಕಡಿಮೆ ಹಣ ನೀಡಿ, ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಇದು ಜನರಿಗೆ ಅರ್ಥವೇ ಆಗುತ್ತಿಲ್ಲ. ಅದು ಕೇವಲ ಹೆಸರಿಗಷ್ಟೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಎನಿಸಿಕೊಂಡಿದೆ. ಆದರೆ, ಅಲ್ಲಿ ಧರ್ಮದ ಕೆಲಸಗಳು ನಡೆಯುತ್ತಿಲ್ಲ. ಧರ್ಮಸ್ಥಳ ಸಂಘವು ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಲು ಮುಂದಾಗಿದೆ. ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವನ್ನು ಬಿಟ್ಟು, ನಮ್ಮ ಸರ್ಕಾರದ ಸಂಜೀವಿನಿ ಯೋಜನೆಯ ಮೂಲಕ ಆರ್ಥಿಕ ಚಟುವಟಿಕೆ ಆರಂಭಿಸಿ, ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಿ ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದವರು 10 ಸಾವಿರ, 20 ಸಾವಿರ ರೂಪಾಯಿ ಸಾಲ ಪಡೆದು ಹೆಚ್ಚಿಗೆ ಬಡ್ಡಿ ಕಟ್ಟಿಸಿಕೊಳ್ಳುತ್ತಾರೆ. ಆದರೆ, ಜನರಿಗೆ ಇದರ ಮೋಸ ಗೊತ್ತಾಗುತ್ತಿಲ್ಲ. ಅದು ಹೆಸರಿಗಷ್ಟೆ ಧರ್ಮಸ್ಥಳ ಸಂಘ. ಧರ್ಮಸ್ಥಳ ಸಂಘದಲ್ಲಿ ಧರ್ಮದ ಕಾರ್ಯ ನಡೆಯುತ್ತಿಲ್ಲ. ಆ ಶೋಷಣೆ ತಪ್ಪಿಸಲು ನಾವು (ಕಾಂಗ್ರೆಸ್ ಸರ್ಕಾರ) ತಿಂಗಳಿಗೆ 2 ಸಾವಿರ ಕೊಡುತ್ತಿದ್ದೇವೆ ಎಂದು ನರೇಂದ್ರಸ್ವಾಮಿ ಹೇಳಿದ್ದಾರೆ. ಮಳವಳ್ಳಿ ಶಾಸಕರ ಈ ಹೇಳಿಕೆ ಇದೀಗ ಸಂಚಲನ ಸೃಷ್ಟಿಸಿದ್ದು ಧರ್ಮಸ್ಥಳ ಪ್ರಭುತ್ವದ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ.

You may also like

Leave a Comment