Home » Hassan: ದಸರಾ ಉದ್ಘಾಟನೆಗೆ ಬರಲ್ಲ ಎಂದು ಹೇಳಿ – ಭಾನು ಮುಷ್ತಾಕ್ ಮನೆಗೇ ಭೇಟಿ ನೀಡಿ ಮನವಿ ಸಲ್ಲಿಸಿದ ‘ರಾಷ್ಟ್ರ ರಕ್ಷಣಾ ಸೇನೆ’

Hassan: ದಸರಾ ಉದ್ಘಾಟನೆಗೆ ಬರಲ್ಲ ಎಂದು ಹೇಳಿ – ಭಾನು ಮುಷ್ತಾಕ್ ಮನೆಗೇ ಭೇಟಿ ನೀಡಿ ಮನವಿ ಸಲ್ಲಿಸಿದ ‘ರಾಷ್ಟ್ರ ರಕ್ಷಣಾ ಸೇನೆ’

0 comments

Hassan : ಭೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್ ಅವರನ್ನು ಈ ಬಾರಿಯ ದಸರಾ ಉದ್ಘಾಟಕರಾಗಿ ಸರ್ಕಾರ ಘೋಷಿಸಿದ್ದು ಜಿಲ್ಲಾಡಳಿತವು ಅಧಿಕೃತವಾಗಿ ಅವರ ಮನೆಗೆ ತೆರಳಿ ಆಹ್ವಾನವನ್ನು ಕೂಡ ಇಟ್ಟಿದೆ. ಆದರೆ ಈ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದವು ಹಿಂದು ಪರ ಸಂಘಟನೆಗಳು ಹಾಗೂ ಬಿಜೆಪಿ ಭಾನು ಅವರ ಆಹ್ವಾನವನ್ನು ವಿರೋಧಿಸುತ್ತಿವೆ. ಇದರ ನಡುವೆ ರಾಷ್ಟ್ರದಕ್ಷಣ ಸೇನೆ ಬಾನು ಮುಷ್ತಾಕ್ ಅವರ ಮನೆಗೆ ತೆರಳಿ ದಸರಾ ‘ಉದ್ಘಾಟನೆಗೆ ಬರಲ್ಲ ಹೇಳಿ’ ಎಂದು ಮನವಿ ಮಾಡಿದೆ.

ಇದನ್ನೂ ಓದಿ:Top Indian Institutes: ದೇಶದ ಟಾಪ್ 10 ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಬಿಡುಗಡೆ – ನಮ್ಮ ರಾಜ್ಯದ ಯಾವ ಕಾಲೇಜ್‌ ಇದೆ?

ಹೌದು, ಉದ್ಘಾಟನೆ ಆಹ್ವಾನ ತಿರಸ್ಕರಿಸಿ ಎಂದು ರಾಷ್ಟ್ರ ರಕ್ಷಣಾ ಸೇನೆ ಕಾರ್ಯಕರ್ತರಿಂದ ಬಾನು ಮುಷ್ತಾಕ್ ಅವರಿಗೆ ಮನವಿ ಮಾಡಿದ್ದಾರೆ. ಹಾಸನದ ಬಾನು ಮುಷ್ತಾಕ್ ಮನೆಗೆ ಭೇಟಿ ನೀಡಿ ಮನವಿ ಮಾಡಿದ್ದು, ತಾವು ಭುವನೇಶ್ವರಿ ತಾಯಿ ಬಗ್ಗೆ ವಿರೋಧದ ಮಾತನಾಡಿದ್ದೀರಿ, ದಸರಾ ನಾಡಹಬ್ಬವಾದರೂ ಅದು ನಮ್ಮಹಿಂದೂಗಳ ಹಬ್ಬವಾಗಿದೆ. ಆದ್ದರಿಂದ ನಮ್ಮ ಸಂಸ್ಕೃತಿ ಒಪ್ಪದ ನೀವು ದಸರಾದಿಂದ ಹಿಂದೆ ಸರಿಯಿರಿ, ನೀವು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆದರೆ ದಸರಾ ಉದ್ಘಾಟನೆಯಿಂದ ನೀವೇ ಹಿಂದೆ ಸರಿಯಿರಿ ಎಂದು ಮನವಿ ಮಾಡಿದ್ದಾರೆ.

You may also like