Home » Jennifer Lopez: ಅರೇರೇ ಎಂತಾ ಕಾಲ ಬಂತಪ್ಪ?? ಜೆನ್ನಿಫರ್ ಲೋಪೆಜ್‌ಗೆ ವಜ್ರ ಖಚಿತ ಟಾಯ್ಲೆಟ್ ಗಿಫ್ಟ್ ಕೊಟ್ಟ ಪತಿ: ಇದರ ಮೌಲ್ಯ ಕೇಳಿದರೆ ಹುಬ್ಬೇರಿಸೋದು ಪಕ್ಕಾ!!

Jennifer Lopez: ಅರೇರೇ ಎಂತಾ ಕಾಲ ಬಂತಪ್ಪ?? ಜೆನ್ನಿಫರ್ ಲೋಪೆಜ್‌ಗೆ ವಜ್ರ ಖಚಿತ ಟಾಯ್ಲೆಟ್ ಗಿಫ್ಟ್ ಕೊಟ್ಟ ಪತಿ: ಇದರ ಮೌಲ್ಯ ಕೇಳಿದರೆ ಹುಬ್ಬೇರಿಸೋದು ಪಕ್ಕಾ!!

1 comment
Jennifer Lopez

Jennifer Lopez: ಅಮೆರಿಕದ ಖ್ಯಾತ ನಟಿ(American Actor), ಗಾಯಕಿ ಮತ್ತು ನೃತ್ಯಗಾತಿ ಜೆನ್ನಿಫರ್ ಲೋಪೆಜ್ (Jennifer Lopez) ಅವರಿಗೆ ಅವರ ಪತಿ ಬೆನ್ ಅಫ್ಲೆಕ್ (Ben Affleck) ನೀಡಿದ ಉಡುಗೊರೆ ಬಗ್ಗೆ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ!! ಇದೇನು ಕಾಲ ಬಂತಪ್ಪ?? ಹೀಗೂ ಕೂಡಾ ಗಿಫ್ಟ್ ನೀಡುತ್ತಾರಾ?? ಎಂದು ನೆಟ್ಟಿಜನ್ಸ್ ಚರ್ಚೆ ನಡೆಸುತ್ತಿದ್ದಾರೆ.

ನಟಿ ಜೆನ್ನಿಫರ್ ಲೋಪೆಜ್ ಅವರು ವರ್ಷದ ಹಿಂದೆ ಬೆನ್‌ ಅಫ್ಲೆಕ್ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದರು.ಜೆನ್ನಿಫರ್ ಅವರು ಗಾಯನ, ನೃತ್ಯ ಮತ್ತು ನಟನೆಯ ಮೂಲಕ ತಮ್ಮ ಅಭಿಮಾನಿಗಳನ್ನು ಸದಾ ರಂಜಿಸು ವುದು ಮಾಮೂಲಿ.ಈ ಹಿಂದೆ ಅವರು ವಜ್ರ ಖಚಿತ ಉಡುಗೆಯೊಂದಿಗೆ ಸೆಲ್ಫಿಗೆ ಪೋಸು ನೀಡಿದ್ದರು. ಇದೀಗ, ಬೆನ್‌ ಅಫ್ಲೆಕ್ ಅವರು ತಮ್ಮ ಪತ್ನಿಗೆ 88 ಲಕ್ಷ ಮೌಲ್ಯದ ವಜ್ರ ಖಚಿತ ಟಾಯ್ಲ್ ಸೀಟ್ (Toilet Seat Encrusted With Diamond)ಅನ್ನು ಗಿಫ್ಟ್ ನೀಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಜೆನ್ನಿಫರ್ ಲೋಪೆಜ್ ಅವರು ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡುತ್ತಾರಂತೆ. ಯಾವುದೇ ಕೊಳಕಾದ ಮೇಲೆ ಕುಳಿತುಕೊಳ್ಳಲು ಅವರು ಇಷ್ಟಪಡುವುದಿಲ್ಲವಂತೆ. ಹೀಗಾಗಿ, ಜೆನಿಫರ್ ಅವರ ಪತಿ ಮುತ್ತುಗಳು ಮತ್ತು ವಜ್ರ ಖಚಿತವಾದ ಟಾಯ್ಲೆಟ್ ಸೀಟ್ ನೀಡಿದ್ದಾರೆ ಎನ್ನಲಾಗಿದೆ.ಟಾಯ್ಲೆಟ್ ಸೀಟ್ ಅನ್ನು ಮುತ್ತುಗಳು, ಮಾಣಿಕ್ಯಗಳು, ನೀಲಮಣಿಗಳು ಮತ್ತು ಬೃಹತ್ ವಜ್ರದಂತಹ ದುಬಾರಿ ಆಭರಣಗಳಿಂದ ಮಾಡಲಾಗಿದೆ ಎನ್ನಲಾಗಿದೆ. ಬೆನ್‌ ಅಫ್ಲೆಕ್ ಪತ್ನಿಗೆ 88 ಲಕ್ಷ ಮೌಲ್ಯದ ವಜ್ರ ಖಚಿತ ಟಾಯ್ಲೆಟ್ ಸೀಟ್‌ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

ಇದನ್ನು ಓದಿ: LPG Price: ಗೃಹಿಣಿಯರಿಗೆ ಬಂಪರ್ ಸಿಹಿ ಸುದ್ದಿ, ಎಲ್ ಪಿಜಿ ಸಿಲಿಂಡರ್ ಬೆಲೆ 450 ರೂ!!

You may also like

Leave a Comment