Home » Central Govt: ಮಹತ್ವದ ಹೆಜ್ಜೆಯತ್ತ ಕೇಂದ್ರ ಸರಕಾರ! 1.4 ಲಕ್ಷ ಮೊಬೈಲ್‌ ಬ್ಲಾಕ್‌, 3 ಲಕ್ಷ ಸಿಮ್‌ ಬ್ಲಾಕ್‌

Central Govt: ಮಹತ್ವದ ಹೆಜ್ಜೆಯತ್ತ ಕೇಂದ್ರ ಸರಕಾರ! 1.4 ಲಕ್ಷ ಮೊಬೈಲ್‌ ಬ್ಲಾಕ್‌, 3 ಲಕ್ಷ ಸಿಮ್‌ ಬ್ಲಾಕ್‌

0 comments

Central Govt: ದೇಶದೆಲ್ಲೆಡೆ ಬಹುತೇಕ ಜನರನ್ನು ಕರೆ ಅಥವಾ ಎಸ್ಎಂಎಸ್ ಮೂಲಕ ಮೋಸ ಮಾಡುವ ಜಾಲ ಹೆಚ್ಚುತ್ತಿದ್ದು, ಸೈಬರ್ ಅಪರಾಧ ಪೊಲೀಸರು ಕೂಡ ಇವುಗಳ ಮೇಲೆ ಒಂದು ಕಣ್ಣಿಟ್ಟಿದೆ. ಕೇಂದ್ರ ಸರ್ಕಾರವು ಈ ವರೆಗೆ 1.4 ಲಕ್ಷ ಮೊಬೈಲ್ ಗಳನ್ನು ಹಾಗೂ 3 ಲಕ್ಷ ಸಿಮ್ ಗಳನ್ನೂ ಸೇರಿದಂತೆವಿವಿಧ ಪ್ರಕರಣದಡಿ 500 ಮಂದಿಯನ್ನು ಬಂಧಿಸಿರುವುದಾಗಿ ತಿಳಿಸಿದೆ.

ಹಣಕಾಸು ಸೇವಾ ವಲಯದಲ್ಲಿ ಸೈಬರ್ ಭದ್ರತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ, ಕೇಂದ್ರ ಸರ್ಕಾರವು ಈ ವರೆಗೆ 1.4 ಲಕ್ಷ ಮೊಬೈಲ್ ಗಳನ್ನು ಹಾಗೂ 3 ಲಕ್ಷ ಸಿಮ್ ಗಳನ್ನೂ ಸೇರಿದಂತೆವಿವಿಧ ಪ್ರಕರಣದಡಿ 500 ಮಂದಿಯನ್ನು ಬಂಧಿಸಿರುವುದಾಗಿ, ಹಾಗೂ ಈ ಮೊಬೈಲ್ ನಂಬರ್ ಗಳಿಂದ ಕರೆ ಮಾಡಿ ವಂಚನೆ ಮಾಡಲಾಗುತ್ತಿತ್ತು ಎಂದು ಅಧಿಕೃತವಾಗಿ ಹೇಳಿದ್ದಾರೆ.

ಸಭೆಯಲ್ಲಿ API ಏಕೀಕರಣದ ಮುಖೇನ ನಾಗರಿಕ ಹಣಕಾಸು ಸೈಬರ್ ವಂಚನೆ ಮಾಹಿತಿ ಮತ್ತು ನಿರ್ವಹಣಾ ವ್ಯವಸ್ಥೆ, ಪ್ಲಾಟ್‌ಫಾರ್ಮ್‌ನ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಆನ್‌ಬೋರ್ಡಿಂಗ್ ಒಳಗೊಂಡಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಚರ್ಚೆಯಾದ ಮಾಹಿತಿಯ ಅನುಸಾರ CFCFRMS ಪ್ಲಾಟ್‌ಫಾರ್ಮ್ ಅನ್ನು ರಾಷ್ಟ್ರೀಯ ಸೈಬರ್ ಅಪರಾಧ ಮಾಹಿತಿ ಪೋರ್ಟಲ್ ನೊಂದಿಗೆ ಲಿಂಕ್ ಮಾಡಲಾಗುವುದು. ಇದು ಪೊಲೀಸ್, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ದೂರ ಸಂಪರ್ಕ ಇಲಾಖೆಯು ಎಂಎಂಎಸ್ ಕಳುಹಿಸುವ 35 ಲಕ್ಷ ಪ್ರಥಮ ಘಟಕದವರನ್ನು ಹುಡುಕಿದೆ. ಅದರಲ್ಲಿ ಕೆಟ್ಟ ಉದ್ಧೇಶಡಿಂದ ಸಂದೇಶ ಕಳುಹಿಸುವ 19,776 ಘಟಕಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಇದಕ್ಕೆ ಸಂಭಂದಿಸಿದ 500 ಮಂದಿಯನ್ನು ಬಂಧಿಸಿ 3.08 ಲಕ್ಷ ಸಿಮ್ ಕಾರ್ಡ್ ಗಳನ್ನು ಬ್ಲಾಕ್ ಮಾಡಲಾಗಿದೆ.

ಸೈಬರ್ ವಂಚನೆಯನ್ನು ತಪ್ಪಿಸುವುದು ಹೇಗೆ?

ಅಪರಿಚಿತವಾದ ಬರುವ sms ಅಥವಾ email ಗಳು ಕ್ಲಿಕ್ ಮಾಡಬೇಡಿ. ಯಾವುದೇ ಅಪರಿಚಿತ ವ್ಯಕ್ತಿಗೆ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿ ನೀಡಬೇಡಿ. ಯಾವುದೇ ಅನುಮಾನದ ಕರೆ,ಎಸ್ಎಂಎಸ್ ಗಳಿಗೆ ಪ್ರತಿಕ್ರಿಯೆ ನೀಡಬೇಡಿ.

ಕರ್ನಾಟಕ ಸೇರಿದಂತೆ ದೇಶದ ಎಲ್ಲ ಭಾಗದಲ್ಲಿ ಈ ಸೈಬರ್ ವಂಚನೆ ಹೆಚ್ಚುತ್ತಿದೆ. ಪೊಲೀಸರು ಸಹ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅದಷ್ಟು ಅಪರಿಚಿತರಿಂದ ಯಾವುದೇ ಮಾಹಿತಿ ನೀಡಬೇಡಿ.

You may also like

Leave a Comment