Home » Firecracker Units Explosion: ಮತ್ತೊಂದು ಪಟಾಕಿ ದುರಂತ! ಪಟಾಕಿ ಮಳಿಗೆ ಭಸ್ಮಗೊಂಡು 9 ಮಹಿಳೆಯರು ಸೇರಿ 11 ಮಂದಿ ಮೃತ!

Firecracker Units Explosion: ಮತ್ತೊಂದು ಪಟಾಕಿ ದುರಂತ! ಪಟಾಕಿ ಮಳಿಗೆ ಭಸ್ಮಗೊಂಡು 9 ಮಹಿಳೆಯರು ಸೇರಿ 11 ಮಂದಿ ಮೃತ!

by Mallika
1 comment
Firecracker Units Explosion

Firecracker Units Explosion: ಬೆಂಗಳೂರಿನ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತ ಇನ್ನೂ ಮಾಸುವ ಮೊದಲೇ ತಮಿಳುನಾಡಿನ ಶಿವಕಾಶಿ ಬಳಿಯ ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ ಮಂಗಳವಾರ ಒಂದರ ಹಿಂದೆ ಒಂದರಂತೆ ಎರಡು ಸ್ಫೋಟಗಳು ಸಂಭವಿಸಿದ್ದು, ಪಟಾಕಿಗಳನ್ನು ಪರೀಕ್ಷಿಸುವಾಗ ಎರಡು ಪಟಾಕಿ ಘಟಕಗಳು ಬೆಂಕಿಗೆ ಆಹುತಿಯಾಗಿವೆ ಎಂದು ವರದಿಯಾಗಿದೆ. ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ಎರಡು ಪಟಾಕಿ ಕಾರ್ಖಾನೆಗಳಲ್ಲಿ ಸಂಭವಿಸಿದ ಸ್ಫೋಟದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ 9 ಮಹಿಳೆಯರು ಸೇರಿದ್ದಾರೆ.

‘ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ್ದು, ಸ್ಥಳದಿಂದ 7 ಸುಟ್ಟ ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ ಗುರುತು ಪತ್ತೆಯಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ. ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡ ಎರಡನೇ ಘಟನೆ ಕಮ್ಮಪಟ್ಟಿ ಗ್ರಾಮದಲ್ಲಿ ನಡೆದಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

 

ಇದನ್ನು ಓದಿ: Kachidi gold Fish: ಮೀನುಗಾರನ ಬಲೆಗೆ ಬಿದ್ದ ಈ ಮೀನು, ಅದೃಷ್ಟದ ಬಾಗಿಲು ತೆರೆಯಿತು! ಲಕ್ಷ ಲಕ್ಷ ಕೊಟ್ಟ ಈ ಮೀನು ಯಾವುದು?

You may also like

Leave a Comment