Home » Latest news: ಅಮಾನವೀಯ ಘಟನೆ, ನಾಯಿ ಕೊಂದ ಆರೋಪ; ತಾಯಿ ಮಗನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ! ವಿಡಿಯೋ ವೈರಲ್‌

Latest news: ಅಮಾನವೀಯ ಘಟನೆ, ನಾಯಿ ಕೊಂದ ಆರೋಪ; ತಾಯಿ ಮಗನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ! ವಿಡಿಯೋ ವೈರಲ್‌

by Mallika
1 comment
Latest news

Latest news: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಮ್ಮ ನಾಯಿಯನ್ನು ಕೊಂದು ಬಾವಿಗೆ ಬಿಸಾಡಿದ್ದಾನೆಂಬ ಆರೋಪದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಥಳಿಸಿರುವ ಘಟನೆ ನಡೆದಿದೆ. ತನ್ನ ಮಗನನ್ನು ಹೊಡೆಯುವುದನ್ನು ನೋಡಿ ಅಸಹಾಯಕ ತಾಯಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಾಳೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇದು ಸೆಮರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ದುವಾರಿ ಗ್ರಾಮದ ಪ್ರಕರಣ. ಆರೋಪಿ ಯುವಕ ಶಿವಂ ಸಿಂಗ್ ಎಂಬಾತ ಸಂಪೂರ್ಣಾನಂದ ಅವಸ್ಥಿ ಎಂಬಾತ ತಂತಿಗೆ ವಿದ್ಯುತ್ ಹರಿಸಿ ನಾಯಿ ಸಾಯೋ ಹಾಗೆ ಮಾಡಿದ್ದಾನೆಂದು, ಹಾಗೂ ನಾಯಿ ಸಾಯಿಸಿದರ ಗುರುತು ಸಿಗದಂತೆ ಮಾಡಲು ನಾಯಿಯನ್ನು ಬಾವಿಗೆ ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಂ ಸಿಂಗ್ ಅವಸ್ಥಿಗೆ ಥಳಿಸಲು ಆರಂಭಿಸಿದ್ದು, ಇದೇ ವೇಳೆ ಯುವಕನ ತಾಯಿ ಸಮೀಪದ ಕೈಪಂಪ್‌ನಲ್ಲಿ ಸ್ನಾನ ಮಾಡುತ್ತಿದ್ದಳು. ಅದೇ ಅವಸ್ಥೆಯಲ್ಲಿ ಮಗನನ್ನು ಬಿಡಿಸಿಲು ತಾಯಿ ಓಡೋಡಿ ಬಂದಿದ್ದಾಳೆ.

ಮಹಿಳೆ ಆರೋಪಿ ಶಿವಂನನ್ನು ಹಿಡಿಯಲು ಪ್ರಯತ್ನ ಪಟ್ಟಿದ್ದಾಳೆ. ಈ ನಡುವೆ ಯಾರೋ ವಿಡಿಯೋ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಮಹಿಳೆ ಬೆತ್ತಲೆಯಾಗಿರುವುದು ಕಂಡು ಬರುತ್ತದೆ.

ಆರೋಪಿ ಶಿವಂ ಈ ಹಿಂದೆ ನಾಯಿಯನ್ನು ಕೊಂದಿರುವ ಬಗ್ಗೆ ಪೊಲೀಸರಿಗೆ ಲಿಖಿತ ದೂರು ನೀಡಿದ್ದ. ಹೆಚ್ಚುವರಿ ಎಸ್ಪಿ ಅನಿಲ್ ಸೋಂಕರ್ ಮಾತನಾಡಿ, ಆರೋಪಿಗಳು ತಮ್ಮ ನಾಯಿಯನ್ನು ಹತ್ಯೆ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ. ಈ ಕಾರಣಕ್ಕೆ ಸಂಪೂರ್ಣಾನಂದ ಅವಸ್ತಿ ಎಂಬ ಯುವಕನಿಗೆ ಥಳಿಸಿದ್ದಾರೆ. ಹಲ್ಲೆ ನಡೆಸಿ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

You may also like

Leave a Comment