Home » NEET UG 2024 ಅಡ್ಮಿಟ್ ಕಾರ್ಡ್ ಬಿಡುಗಡೆ, ಹಾಲ್ ಟಿಕೆಟ್‌ ಡೌನ್‌ಲೋಡ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ !

NEET UG 2024 ಅಡ್ಮಿಟ್ ಕಾರ್ಡ್ ಬಿಡುಗಡೆ, ಹಾಲ್ ಟಿಕೆಟ್‌ ಡೌನ್‌ಲೋಡ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ !

0 comments
NEET UG 2024

NEET-UG: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಅಭ್ಯರ್ಥಿಗಳು ಡೌನ್‌ಲೋಡ್ ಮಾಡಲು ಅಧಿಕೃತ ವೆಬ್‌ಸೈಟ್‌ನಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET-UG) 2024 ರ ಪ್ರವೇಶ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ. ನೋಂದಾಯಿತ ಅಭ್ಯರ್ಥಿಗಳು NEET UG 2024 ಪ್ರವೇಶ ಕಾರ್ಡ್‌ಗಳನ್ನು NTA NEET ನ ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅಲ್ಲಿಂದ ನೀಟ್ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.

NEET UG 2024 ಅನ್ನು ದೇಶದಾದ್ಯಂತ ಸುಮಾರು 571 ನಗರಗಳಲ್ಲಿ ಮತ್ತು ಭಾರತದ ಹೊರಗಿನ 14 ನಗರಗಳಲ್ಲಿ ಪೆನ್ ಮತ್ತು ಪೇಪರ್ ಅಂದರೆ ಆಫ್‌ಲೈನ್ ವಿಧಾನದಲ್ಲಿ ನಡೆಸಲಾಗುವುದು. ನೋಂದಾಯಿತ ಅಭ್ಯರ್ಥಿಗಳು NEET UG 2024 ಪ್ರವೇಶ ಕಾರ್ಡ್‌ಗಳನ್ನು NTA NEET ನ ಅಧಿಕೃತ ವೆಬ್‌ಸೈಟ್ neet.ntaonline.in ನಲ್ಲಿ ಮತ್ತು exams.nta.ac.in ನಲ್ಲಿ ಡೌನ್‌ಲೋಡ್ ಮಾಡಬಹುದು. ಪರೀಕ್ಷೆಯನ್ನು ಮೇ 5, 2024 ರಂದು ಮಧ್ಯಾಹ್ನ 2.00 ರಿಂದ ಸಂಜೆ 5.20 ರವರೆಗೆ ಒಂದೇ ಪಾಳಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅಂದರೆ 3 ಗಂಟೆ 20 ನಿಮಿಷಗಳ ಪತ್ರಿಕೆ ಇದಾಗಿರಲಿದೆ. ಒಟ್ಟು 720 ಮಾರ್ಕುಗಳಿಗೆ ನಡೆಯುವ ದೇಶದ ಅತ್ಯುತ್ತರುಗಳನ್ನು ನಿರ್ಮಿಸುವ ಆಯ್ಕೆ ಮಾಡಲು ಬಯಸುವ ಈ ಪರೀಕ್ಷೆಯಲ್ಲಿ ಗುಂಡೂರ ಅರವತ್ತು ಮಾತುಗಳಿಗೆ ಜೀವಶಾಸ್ತ್ರದ ಪ್ರಶ್ನೆಗಳು ಇದ್ದರೆ, ಉಳಿದ ತಲಾ 180 ಮಾರ್ಗಗಳು ಬೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಿಂದ ಕೊಡಲಾಗುತ್ತದೆ.

ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡಲು ನೇರ ಲಿಂಕ್ ಇಲ್ಲಿದೆ ನೋಡಿ.
ಡೌನ್‌ಲೋಡ್ ಸ್ಟೆಪ್ ಹೀಗಿದೆ:
NTA NEET ನ ಅಧಿಕೃತ ವೆಬ್‌ಸೈಟ್ neet.ntaonline.in ಅಥವಾ exams.nta.ac.in ನಲ್ಲಿ ಭೇಟಿ ನೀಡಿ.

1) ಮುಖಪುಟದಲ್ಲಿ, ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಲಿಂಕ್ ಅನ್ನು ಹುಡುಕಿ ಮತ್ತು ಅದನ್ನು ಕ್ಲಿಕ್ ಮಾಡಿ.
2) ನೋಂದಾಯಿತ ಅಭ್ಯರ್ಥಿಯು ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ಮಾಹಿತಿಯನ್ನು ಒದಗಿಸಬೇಕಾದ ಹೊಸ ಪುಟವು ತೆರೆದು ಕೊಳ್ಳುತ್ತದೆ.
3) ಅಲ್ಲಿ ಅಗತ್ಯ ಮಾಹಿತಿಯನ್ನು ಸಲ್ಲಿಸಿದ ನಂತರ, ನೀವು ಪರದೆಯ ಮೇಲೆ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ
ವಿವರಗಳನ್ನು ಪರಿಶೀಲಿಸಿ ಮತ್ತು ಅಡ್ಮಿಟ್ ಪುಟವನ್ನು ಡೌನ್‌ಲೋಡ್ ಮಾಡಿ ಜಾಗ್ರತೆಯಾಗಿ ಇಟ್ಟುಕೊಳ್ಳಿ. ಅಡ್ಮಿಟ್ ಕಾರ್ಡ್ ಅಂದರೆ ಪ್ರವೇಶ ಪತ್ರ ಇಲ್ಲದೆ ನೀಟ್ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಪ್ರವೇಶ ಪತ್ರದ ಜೊತೆಗೆ ಆಧಾರ್ ಕಾರ್ಡ್ ಯಾ ಇನ್ಯಾವುದಾದರೂ ಐಡಿ ಪ್ರೂಫ್ ಅನ್ನು ತೆಗೆದುಕೊಂಡು ಹೋಗುವುದು ಅಗತ್ಯ.

You may also like

Leave a Comment