Home » Neha Hiremath: ನನ್ನ ಜೊತೆ ಮಾತಾಡಲ್ಲ ಅಂದಳು, ಚಾಕು ಹಾಕಿದೆ- ಆರೋಪಿ ಫಯಾಜ್‌

Neha Hiremath: ನನ್ನ ಜೊತೆ ಮಾತಾಡಲ್ಲ ಅಂದಳು, ಚಾಕು ಹಾಕಿದೆ- ಆರೋಪಿ ಫಯಾಜ್‌

4 comments
Neha Hiremath

Neha Hiremath: ಹುಬ್ಬಳ್ಳಿಯ ವಿದ್ಯಾನಗರದಲ್ಲಿಉರವ ಬಿವಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿಯನ್ನು ಎ.18 ರಂದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿ ಫಯಾಜ್‌ನನ್ನು ಪೊಲೀಸರು ಬಂಧನ ಮಾಡಿದ್ದು, ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಇಟ್ಟಿದ್ದಾರೆ.

ಇದನ್ನೂ ಓದಿ: Health Tips ಈ 5 ಬಗೆಯ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಅಪ್ಪಿತಪ್ಪಿಯು ಇಡಬೇಡಿ? : ಯಾಕೆ ಅಂತ ಗೊತ್ತಾದ್ರೆ ಶಾಕ್ ಆಗ್ತಿರ

ಕಾರಾಗೃಹದಲ್ಲಿರುವ ಆರೋಪಿ ಫಯಾಜ್‌ ಸಿಬ್ಬಂದಿ ಎದುರು ಕೊಲೆಗೆ ಕಾರಣವನ್ನು ಹೇಳಿದ್ದಾಗಿ ಟಿವಿ9 ಮಾಧ್ಯಮವು ಪ್ರಕಟ ಮಾಡಿದೆ.

“ಅವಳು (ನೇಹಾ) ನನ್ನ ಜೊತೆ ಮಾತನಾಡಲ್ಲ ಅಂದಳು. ಅದಕ್ಕೆ ನಾನು ಚಾಕು ಹಾಕಿದೆ” ಎಂದು ಫಯಾಜ್‌ ಕಾರಾಗೃಹ ಸಿಬ್ಬಂದಿ ಎದುರು ಹೇಳಿರುವ ಕುರಿತು ಟಿವಿ9 ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: children Obesity ಮಲಗುವ ಮುನ್ನ ಮೊಬೈಲ್ ಬಳಸುವ ಮಕ್ಕಳು ಸ್ಥೂಲಕಾಯಕ್ಕೆ ಬಲಿಯಾಗುತ್ತಾರೆ : ಸಂಶೋಧನೆಯಲ್ಲಿ ಬಹಿರಂಗ

ಅಲ್ಲದೇ ಅಂದು ಏನು ನಡೆಯಿತೆಂದು ಆರೋಪಿ ಹೇಳಿದ್ದಾನೆ. ಘಟನೆ ನಡೆಯುವ ಮೊದಲೇ ನಾನು ಕಾಲೇಜು ಬಿಟ್ಟಿದೆ. ಒಂದು ವಾರದ ಹಿಂದೆ ಕಾಲೇಜ್‌ಗೆ ಹೋಗಿ ನೇಹಾಳನ್ನು ಮಾತನಾಡಿಸಲು ಪ್ರಯತ್ನ ಪಟ್ಟೆ. ಆದರೆ ಅವಳು ನಿನ್ನ ಜೊತೆ ಮಾತನಾಡಲು ಇಷ್ಟವಿಲ್ಲ ಎಂದು ಹೇಳಿ ಅವೈಡ್‌ ಮಾಡಿದಳು.

ಎ.18 ರಂದು ಅವಳು ಪರೀಕ್ಷೆ ಬರೆಯಲೆಂದು ಕಾಲೇಜಿಗೆ ಬಂದಿದ್ದಳು. ನಾನು ಮತ್ತೆ ಕಾಲೇಜಿಗೆ ಹೋದಿದೆ. ಪರೀಕ್ಷೆ ಮುಗಿಯುವವರೆಗೆ ಕಾದೆ. ಪರೀಕ್ಷೆ ಮುಗಿದ ಬಳಿಕ ಹೊರಗೆ ಬಂದ ಅವಳನ್ನು ಮಾತನಾಡಿಸಲು ಪ್ರಯತ್ನ ಪಟ್ಟೆ. ಆದರೆ ಅವಳು ಮಾತನಾಡಲ್ಲ ಎಂದಳು. ಹೀಗಾಗಿ ಚಾಕುವಿನಿಂದ ಹತ್ತು ಬಾರಿ ಚುಚ್ಚಿದೆ. ಅವಳಿಗೆ ಚಾಕು ಹಾಕು ವೇಳೆ ನನ್ನ ಎರಡು ಕೈ ಬೆರಳು, ಕಾಲಿಗೆ ಗಾಐವಾಗಿದೆ. ಏನಾಗಿದೆ ಅನ್ನೋದು ಗೊತ್ತಿಲ್ಲ, ಅವಳು ಮಾತಾಡಲ್ಲ ಎಂದಾಗ ಚಾಕು ಹಾಕಿದ್ದೇನೆ ಎಂದು ಕಾರಾಗೃಹ ಸಿಬ್ಬಂದಿ ಎದುರು ಫಯಾಜ್‌ ಹೇಳಿರುವುದಾಗಿ ಟಿವಿ9 ವರದಿ ಮಾಡಿದೆ.

You may also like

Leave a Comment