Home » Neha Hiremat Murder: ನೇಹಾ ಹತ್ಯೆ ಪ್ರಕರಣ: ಕಾಂಗ್ರೆಸ್ ವರಿಷ್ಠರಿಗೆ ಚುನಾವಣೆ ಹೊತ್ತಲ್ಲಿ ತಲೆಬಿಸಿ

Neha Hiremat Murder: ನೇಹಾ ಹತ್ಯೆ ಪ್ರಕರಣ: ಕಾಂಗ್ರೆಸ್ ವರಿಷ್ಠರಿಗೆ ಚುನಾವಣೆ ಹೊತ್ತಲ್ಲಿ ತಲೆಬಿಸಿ

0 comments
Neha Hiremath Murder

Neha Hiremat Murder: ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಚುನಾವಣೆ ಹೊತ್ತಿನಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಡ್ಯಾಮೇಜ್ ಮಾಡಲಿದೆ ಎಂಬ ಆತಂಕ ಆಡಳಿತಾರೂಢ ಕಾಂಗ್ರೆಸ್‌ಗೆ ಎದುರಾಗಿದೆ. ಅಲ್ಪಸಂಖ್ಯಾತ ಓಲೈಕೆ ಸರಕಾರ ಎಂಬ ಆರೋಪವನ್ನು ಗಟ್ಟಿಗೊಳಿಸುವಂತೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವ ಬಗ್ಗೆ ಎಐಸಿಸಿ ಹೈಕಮಾಂಡ್ ಕೂಡ ಕಳವಳಗೊಂಡಿದ್ದು, ಡ್ಯಾಮೇಜ್ ಕಂಟ್ರೋಲ್‌ಗೆ ಕಟ್ಟಪ್ಪಣೆ ಮಾಡಿದೆ.

ಇದನ್ನೂ ಓದಿ: Crime: ಗದಗ ನಾಲ್ವರ ಕೊಲೆ ಪ್ರಕರಣ; ಸಿಸಿ ಕ್ಯಾಮೆರಾದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ದೃಶ್ಯ ವೈರಲ್

ಪ್ರಕರಣದ ಬಗ್ಗೆ ಸೂಕ್ಷ್ಮತೆ ಇಲ್ಲದ ನಾಯಕರ ಹೇಳಿಕೆಗಳು ಜನರಿಗೆ ತಪ್ಪು ಸಂದೇಶ ನೀಡುತ್ತಿವೆ. ಇದು ವಿಶೇಷವಾಗಿ

ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳಲ್ಲಿ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, ಲಿಂಗಾಯತ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಲಿವೆ ಎಂಬ ವರದಿಗಳು ಎಐಸಿಸಿ ವರಿಷ್ಠರ ತಲೆಬಿಸಿ ಮಾಡಿವೆ.

ಇದನ್ನೂ ಓದಿ: Dakshina Kannada: ರೈತರಿಗೆ ಶಸ್ತ್ರಾಸ್ತ್ರ ವಾಪಸ್; ಷರತ್ತು ಅನ್ವಯ

ಇದರ ಬೆನ್ನಲ್ಲೆ, ಪ್ರಕರಣವನ್ನು ಸೂಕ್ಷ್ಮವಾಗಿ ನಿಭಾಯಿಸುವಂತೆ ರಾಜ್ಯ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ನಿರ್ದೇಶನ ನೀಡಿದ್ದಾರೆ. ‘ವೈಯಕ್ತಿಕ ವಿಚಾರದಲ್ಲಿ ನಡೆದಿರುವ ಹತ್ಯೆ ಇದು’ ಎಂಬ ಸಿಎಂ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ, ‘ಇಬ್ಬರ ನಡುವೆ ಅಫೇ‌ರ್ ಇತ್ತು’ ಎಂಬ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆಗಳು ತೀವ್ರ ವಿವಾದ ಸೃಷ್ಟಿಸಿವೆ. ಗೃಹ ಸಚಿವರ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಇದರ ತೀವ್ರತೆ ಮತ್ತು ಪರಿಣಾಮಗಳ ಬಗ್ಗೆ ಸುರ್ಜೇವಾಲಾ ತೀವ್ರ ಆತಂಕಗೊಂಡಿದ್ದಾರೆ. ಹಾಗಾಗಿ, ಸುರ್ಜೇವಾಲಾ ಸೂಚನೆ ಆಧರಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಹತ್ಯೆಯಾದ ಯುವತಿ ನಿವಾಸಕ್ಕೆ ತೆರಳಿ, ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಮತ್ತೊಂದೆಡೆ, ತಮ್ಮ ಹೇಳಿಕೆಗಾಗಿ ಡಾ.ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದ್ದಾರೆ.

You may also like

Leave a Comment