Home » Mangaluru: ನೆಲ್ಯಾಡಿ: ಡಿವೈಡರ್ ಗೆ ಕಾರು ಡಿಕ್ಕಿ ; ಕುಂಬ್ರ ನಿವಾಸಿ ಮೃತ್ಯು

Mangaluru: ನೆಲ್ಯಾಡಿ: ಡಿವೈಡರ್ ಗೆ ಕಾರು ಡಿಕ್ಕಿ ; ಕುಂಬ್ರ ನಿವಾಸಿ ಮೃತ್ಯು

0 comments

Mangaluru: ಮಂಗಳೂರು- ಬೆಂಗಳೂರು (Mangaluru) ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಸ್ಥಳದಲ್ಲಿ ಕಾರೊಂದು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರೋರ್ವರು ಮೃತಪಟ್ಟ ಘಟನೆ ನ.17ರಂದು ಸಂಜೆ ನಡೆದಿದೆ.

ಗುಂಡ್ಯ ಗಡಿಯ ಶಿರಾಡಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗಿ ಬರುತಿದ್ದಾಗ ದುರ್ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ನಡೆಯುತಿದ್ದರಿಂದ ಮಳೆ ಸುರಿಯುತ್ತಿರುವಾಗ ಸ್ಕಿಡ್ ಆಗಿ ಡಿವೈಡರ್ ಗೆ ಕಾರು ಅಪಘಾತವಾಗಿದೆ.

ಮೃತಪಟ್ಟವರು ಕುಂಬ್ರ ನಿವಾಸಿ ಆಗಿದ್ದು, ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಮಾಹಿತಿ ಲಭಿಸಿಲ್ಲ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ತರಲಾಗಿದೆ. ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಹಿತ ನೂರಾರು ಜನ ಅಂತಿಮ ನಮನ ಸಲ್ಲಿಸಿದರು.

You may also like

Leave a Comment