9
All India Thal Sainik Camp: ನವದೆಹಲಿಯಲ್ಲಿ ಸೆಪ್ಟೆಂಬರ್ 2 ರಿಂದ 12 ರವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ಎನ್‌ಸಿಸಿ “ಅಖಿಲ ಭಾರತ ಭೂಸೈನಿಕ ಶಿಬಿರ” (All India Thal Sainik Camp – AITSC)ದಲ್ಲಿ ಭಾಗವಹಿಸಲು ನೆಲ್ಯಾಹುದಿಕೇರಿ ಗ್ರಾಮದ ಟಿ.ಎಸ್.ವಿನಂತಿ ಆಯ್ಕೆಯಾಗಿದ್ದಾರೆ.
ಶಿಬಿರದ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಎನ್‌ಸಿಸಿ ಕೆಡೆಟ್‌ಗಳು ಶಿಸ್ತಿನ ತರಬೇತಿ, ಶಸ್ತ್ರಾಸ್ತ್ರ ಬಳಕೆ, ಶೌರ್ಯ ಪ್ರದರ್ಶನ ಸೇರಿದಂತೆ ಹಲವು ಸ್ಪರ್ಧಾತ್ಮಕ ಹಾಗೂ ಸೈನಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಮೈಸೂರು ಸೆಂಟ್ ಜೋಸೆಫ್ ಕಾಲೇಜಿನ ಎನ್‌ಸಿಸಿ ಕೆಡೆಟ್ ಆಗಿರುವ ಇವರು, ತೆರಂಬಳ್ಳಿ ಸುಧೀರ್ ಕುಮಾರ್ ಹಾಗೂ ಪವಿತ್ರ ದಂಪತಿ ಪುತ್ರಿ.
