ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸುಖ-ಶಾಂತಿ ನೆಲೆಸಬೇಕು. ಆರ್ಥಿಕ ಪ್ರಗತಿ ಆಗಬೇಕು ಎಂದು ಬಯಸುತ್ತಾರೆ. ನಂಬಿಕೆಯೇ ನಮ್ಮ ಜೀವಾಳ ಮತ್ತು ಭರವಸೆಯೂ ಹೌದು. ಪ್ರಾಚೀನ ಕಾಲದಿಂದಲೂ ಭಾರತೀಯರಲ್ಲಿ ಆಚಾರ ವಿಚಾರ ರೂಢಿ ಸಂಪ್ರದಾಯಗಳ ಸೊಗಡು ಎಲ್ಲೆಡೆ ಹರಡಿದೆ. ಹಿರಿಯರ ಅನುಭವ ಮತ್ತು ಶಾಸ್ತ್ರ ಪುರಾಣಗಳ ಪ್ರಕಾರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಒಳಿತು ಎಂಬ ನಂಬಿಕೆ ಇದೆ.ನಾವು ಜೀವನವನ್ನು ಸಂತೋಷ ಮತ್ತು ಸಮೃದ್ಧಿಯಿಂದ ನಡೆಸಲು ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸುವುದು ಸಹಜವಾಗಿದೆ. ಹಾಗೆಯೇ ಅಂಗೈನಲ್ಲಿ ಕೆಲ ವಸ್ತುಗಳನ್ನು ಇತರರಿಗೆ ನೀಡಬಾರದು ಎಂಬುದು ವಾಸ್ತು ಪ್ರಕಾರದ ನಿಲುವಾಗಿದೆ.
ನಾವು ಕೆಲವೊಂದು ಕೆಲಸಗಳನ್ನು ನಮಗೆ ಗೊತ್ತಿಲ್ಲದಂತೆ ತಪ್ಪಾಗಿ ಮಾಡಿರುತ್ತೇವೆ. ನಮ್ಮ ಪ್ರಕಾರ ಆ ಕೆಲಸದಲ್ಲಿ ಯಾವುದೇ ತಪ್ಪು ಇರುವುದಿಲ್ಲ. ಆದರೆ ಜ್ಯೋತಿಷ್ಯದ ಪ್ರಕಾರ ಅದು ನಮ್ಮ ಜೀವನದಲ್ಲಿ ಸಂತೋಷ ಹಾಗೂ ನೆಮ್ಮದಿ ಹಾಳು ಮಾಡುತ್ತದೆ. ಅದಲ್ಲದೆ ನಾವು ಅಂಗೈನಲ್ಲಿ ಈ ಕೆಳಗಿನ ವಸ್ತುಗಳನ್ನು ಕೊಡುವುದು ಲಕ್ಷ್ಮೀ ಕೋಪಗೊಳ್ಳಲು ಕಾರಣವಾಗುತ್ತದೆ.
ಹೌದು ಭಾರತೀಯ ಜೀವನಶೈಲಿಯಲ್ಲಿ, ನಾವು ತಿಳಿದೋ ಅಥವಾ ತಿಳಿಯದೆಯೋ ಮಾಡುವ ಕೆಲವು ಕೆಲಸಗಳು ಜ್ಯೋತಿಷ್ಯದ ಪ್ರಕಾರ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಅಂಗೈನಲ್ಲಿ ಕೆಲ ವಸ್ತುಗಳನ್ನು ಇತರರಿಗೆ ನೀಡಬಾರದು ಎಂದು ಇಲ್ಲಿ ತಿಳಿಸಲಾಗಿದೆ.
- ಮನೆಯಲ್ಲಿ ಟವೆಲ್ ಮತ್ತು ಕರ್ಚೀಫ್ಗಳನ್ನು ಕೈನಲ್ಲಿಯೇ ಕೊಡುವುದು ವಾಡಿಕೆ. ಆದರೆ ಇದು ತಪ್ಪು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಕೈಗೆ ಕರ್ಚೀಫ್ ಕೊಡುವುದರಿಂದ ಹಣ ಖಾಲಿ ಆಗುತ್ತದೆ ಎನ್ನುವ ನಂಬಿಕೆ ಇದೆ.
- ಮುಖ್ಯವಾಗಿ ಗಡಿಬಿಡಿಯಲ್ಲಿ ರೊಟ್ಟಿ ಮತ್ತು ಚಪಾತಿಯನ್ನು ನಾವು ಕೈಗೆ ಕೊಡುತ್ತೇವೆ. ಅದನ್ನು ತಟ್ಟೆಯಲ್ಲಿ ಇಟ್ಟುಕೊಂಡು ತಿನ್ನಬೇಕು. ಅಪ್ಪಿ-ತಪ್ಪಿ ಕೈನಲ್ಲಿ ತಿನ್ನಬಾರದು. ಇದರಿಂದ ಮನೆಯರಿಂದ ಸಿಗುವ ಆಶೀರ್ವಾದ ಸಿಗುವುದಿಲ್ಲ ಎನ್ನಲಾಗುತ್ತದೆ.
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಯಾರಿಗಾದರೂ ಉಪ್ಪನ್ನು ಕೊಡುವಾಗ ಪ್ಲೇಟ್ ಅಥವಾ ಬಟ್ಟಲಿನಲ್ಲಿ ಕೊಡಬೇಕು. ನಾವು ಉಪ್ಪನ್ನು ಯಾರ ಕೈಗೂ ಕೊಡಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉಪ್ಪನ್ನು ನೇರವಾಗಿ ಇನ್ನೊಬ್ಬರ ಕೈಗೆ ಕೊಟ್ಟರೆ ಜಗಳವಾಗುತ್ತದೆ ಎನ್ನಲಾಗುತ್ತದೆ.
- ಮೆಣಸಿನಕಾಯಿಯನ್ನು ನಾವು ಸಾಮಾನ್ಯವಾಗಿ ಬೇರೆಯವರ ಅಂಗೈಗೆ ಕೊಡುತ್ತೇವೆ. ಆದರೆ ಇದು ತಪ್ಪು. ಮೆಣಸಿನಕಾಯಿಯನ್ನು ಸಹ ಕೈನಲ್ಲಿ ಕೊಡುವುದರಿಂದ ಜಗಳ ಉಂಟಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
- ನಾವು ನೀರನ್ನು ಯಾವಾಗಲೂ ಲೋಟದಲ್ಲಿಯೇ ಕೊಡುವುದು, ಆದರೆ ಕೆಲವೊಂದು ಬಾರಿ ಬೊಗಸೆಯಲ್ಲಿ ನೀರನ್ನು ಕೊಡುತ್ತೇವೆ. ಆದರೆ ಇದು ಒಳ್ಳೆಯದಲ್ಲ. ಕೈನಲ್ಲಿ ನೀರು ಕುಡಿಯುವುದರಿಂದ ಸಂಪತ್ತು ನಷ್ಟವಾಗುತ್ತದೆ. ಬಡತಕ್ಕೆ ಕಾರಣವಾಗುತ್ತದೆ ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಈ ಮೇಲಿನಂತೆ ನೀವು ಕೆಲವು ವಸ್ತುಗಳನ್ನು ಬರೀ ಕೈಯಲ್ಲಿ ನೀಡಬಾರದು ಎಂದು ಶಾಸ್ತ್ರಗಳ ಮೂಲಕ ತಿಳಿಸಲಾಗಿದೆ.
