3
Priyank Kharge: ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಆಪ್‌ಗಳಿಗೆ ಶೀಘ್ರದಲ್ಲೇ ಹೊಸ ಮಾನದಂಡ ತರಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್‌ಗೆ ಕಡಿವಾಣ ಹಾಕಲು, ಇವುಗಳ ದುರಾಸೆಗೆ ಬೀಳದಿರಲು ಜನರನ್ನು ಹೇಗೆ ಸಂರಕ್ಷಣೆ ಮಾಡಬೇಕೆನ್ನುವುದರ ಕುರಿತು ಸಭೆ ನಡೆಸಿದ್ದೇವೆ ಎಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಶೀಘ್ರದಲ್ಲೇ ಕೆಲ ಮಾನದಂಡಗಳನ್ನು ತರಲಾಗುತ್ತದೆ. ನಮ್ಮ ದೇಶ ಅಷ್ಟೇ ಅಲ್ಲ, ಬೇರೆ ದೇಶದ ಗೇಮಿಂಗ್ ಆಪ್‌ಗಳು ಇವೆ. ಕಾನೂನು ಬಾಹಿರವಾಗಿರುವುದನ್ನು ಮೊದಲು ನಿಷೇಧ ಮಾಡಬೇಕು. ಲೀಗಲ್ ಆಗಿ ಇದ್ದರೆ ನಿಯಂತ್ರಣ ಹೇಗೆ ಮಾಡುವುದೆನ್ನುದರ ಕುರಿತು ಚರ್ಚೆ ಮಾಡಲಾಗುವುದು ಎಂದು ಹೇಳಿದ್ದಾರೆ.
