Home » Electricity bill: ರಾತ್ರಿ ವೇಳೆ ವಿದ್ಯುತ್ ಬಳಸಿದರೆ ಹೆಚ್ಚು ಶುಲ್ಕ: ಕೇಂದ್ರದ ಹೊಸ ರೂಲ್ಸ್

Electricity bill: ರಾತ್ರಿ ವೇಳೆ ವಿದ್ಯುತ್ ಬಳಸಿದರೆ ಹೆಚ್ಚು ಶುಲ್ಕ: ಕೇಂದ್ರದ ಹೊಸ ರೂಲ್ಸ್

by Mallika
0 comments
New power tariff rules

New power tariff rules: ಕೇಂದ್ರ ಸರ್ಕಾರವು ಶೀಘ್ರದಲ್ಲೇ ಹೊಸ ವಿದ್ಯುತ್ ದರವನ್ನು ಜಾರಿಗೆ (New power tariff rules) ತರಲಿದೆ. ಹೊಸ ನಿಯಮದನ್ವಯ ನೀವು ಬೆಳಗಿನ ನಿರ್ದಿಷ್ಟ ಅವಧಿಯಲ್ಲಿ ಬಳಸುವ ವಿದ್ಯುತ್​ಗೆ ಬೇರೆ ದರ ಇರುತ್ತದೆ. ಹಾಗೂ ಸಂಜೆ ಬಳಸುವ ವಿದ್ಯುತ್​ಗೆ ಬೇರೆ ದರ ಇರುತ್ತದೆ. ಈ ಸಂಬಂಧ ಕೇಂದ್ರ ವಿದ್ಯುತ್ ಸಚಿವಾಲಯವು ಶುಕ್ರವಾರ ಹೊಸ ವಿದ್ಯುತ್ ನಿಯಮಗಳನ್ನು ಪ್ರಕಟಿಸಿದೆ.

ಮುಂದಿನ ವರ್ಷದಿಂದ ಜಾರಿಯಾಗಲಿರುವ ಹೊಸ ನಿಯಮಗಳ ಪ್ರಕಾರ, ಗ್ರಾಹಕರು ದಿನದಲ್ಲಿ ವಿದ್ಯುತ್‌ ಬಳಸುವ ಸಮಯದ ಆಧಾರದ ಮೇಲೆ ದರವನ್ನು ನಿಗದಿಪಡಿಸಲಾಗಿದೆ. ಹಗಲಿನಲ್ಲಿ ವಿದ್ಯುತ್ ಶುಲ್ಕವು ಶೇ.20ರಷ್ಟು ಕಡಿಮೆಯಾದರೆ, ರಾತ್ರಿ ವೇಳೆಯ ಪೀಕ್ ಅವರ್‌ಗಳಲ್ಲಿ ಶೇ.20ರಷ್ಟು ಹೆಚ್ಚಿನ ವಿದ್ಯುತ್ ಶುಲ್ಕ ಇರಲಿದೆ.ಅಲ್ಲದೆ, ಪೀಕ್‌ ಅವರ್‌’ನಲ್ಲಿ ಬಳಸುವ ವಿದ್ಯುತ್‌ ದುಬಾರಿ ಮತ್ತು ‘ನಾನ್‌ ಪೀಕ್‌ ಅವರ್‌’ ಸಮಯದ ವಿದ್ಯುತ್‌ ಅಗ್ಗವಾಗಲಿದೆ.

ಏಪ್ರಿಲ್ 2024ರಿಂದ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಈ ನೀತಿಯನ್ನು ಜಾರಿಗೊಳಿಸುವ ಗುರಿಯನ್ನು ಹೊಂದಿದೆ. 1 ವರ್ಷದ ನಂತರ ಕೃಷಿ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳ ವಿದ್ಯುತ್ ಗ್ರಾಹಕರಿಗೆ ಈ ನಿಯಮ ಅನ್ವಯವಾಗಲಿದೆಯಂತೆ.

ಸೌರ ವಿದ್ಯುತ್‌ ಸೇರಿದಂತೆ ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಹೊಸ ವ್ಯವಸ್ಥೆಯಿಂದಾಗಿ ‘ಪೀಕ್‌ ಅವರ್‌’ನಲ್ಲಿ ಪವರ್‌ ಗ್ರಿಡ್‌ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. 2030ರ ವೇಳೆಗೆ ದೇಶದ 65% ವಿದ್ಯುತ್‌ ಉತ್ಪಾದನೆಯನ್ನು ಪಳಿಯುಳಿಕೆಯೇತರ ಇಂಧನ ಮೂಲದಿಂದ ತಯಾರಿಸುವ ಗುರಿಯತ್ತ ಕೆಲಸ ಮಾಡಲು ದೇಶಕ್ಕೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಕೇಂದ್ರ ವಿದ್ಯುತ್ ಸಚಿವ ಆರ್.ಕೆ.ಸಿಂಗ್‌ ‘ಸೌರ ವಿದ್ಯುತ್ ಅಗ್ಗವಾಗಿದೆ. ಸೌರ ವಿದ್ಯುತ್ ಉತ್ಪಾದನೆಯಾಗುವ ಸಂದರ್ಭದಲ್ಲಿ ಅಂದರೆ ಬಿಸಿಲಿನ ವೇಳೆಯಲ್ಲಿ ಬಳಸಿದರೆ ಗ್ರಾಹಕರಿಗೆ ಅನುಕೂಲವಾಗಲಿದೆ. ಸೌರಶಕ್ತಿ ಲಭ್ಯವಿಲ್ಲದ ರಾತ್ರಿಗಳಲ್ಲಿ ಉಷ್ಣ, ಜಲ ಮತ್ತು ಅನಿಲ ಆಧಾರಿತ ಸ್ಥಾವರಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

 

ಇದನ್ನು ಓದಿ: Visishta Simha- Haripriya: ಕೂದಲೆಳೆಯ ಅಂತರದಲ್ಲಿ ಬಚಾವಾದ ಹರಿಪ್ರಿಯಾ – ವಸಿಷ್ಠ, ಅಷ್ಟಕ್ಕೂ ಅಟ್ಟಿಸಿಕೊಂಡು ಬಂದದ್ದು ಯಾರು ? 

You may also like

Leave a Comment