Home » New Ration Card Application: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ; ಆಹಾರ ಇಲಾಖೆ ಸ್ಪಷ್ಟನೆ

New Ration Card Application: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ; ಆಹಾರ ಇಲಾಖೆ ಸ್ಪಷ್ಟನೆ

266 comments
New Ration Card Application

New Ration Card Application: ಬಹಳಷ್ಟು ಜನ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಕಾತುರದಿಂದ ಕಾಯುತ್ತಿದ್ದು, ಕರ್ನಾಟಕದಲ್ಲಿ ಪ್ರಸ್ತುತ ಜನರಲ್ಲಿ ಉಳಿದಿರುವ ಪ್ರಶ್ನೆ, ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ (New Ration Card Application)  ಸಲ್ಲಿಸಲು ಅರ್ಜಿಗಳು ಆಹ್ವಾನಿಸಲಾಗಿದೆಯಾ? ಅಥವಾ ತಿದ್ದುಪಡಿ ಮಾಡಿಸಲು ಅವಕಾಶ ಕಲ್ಪಿಸಿಕೊಡಲಾಗಿದೆಯಾ?ಎಂಬುದಾಗಿದೆ.

ಮಾಹಿತಿ ಪ್ರಕಾರ ಸದ್ಯಕ್ಕೆ ರೇಷನ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಅಂದರೆ ರೇಷನ್ ಕಾರ್ಡ್ ನಲ್ಲಿ ನಿಮ್ಮ ವಿಳಾಸ ಮತ್ತು ಕುಟುಂಬದ ಮುಖ್ಯಸ್ಥರನ್ನು ಆಯ್ಕೆ ಮಾಡುವುದು ಹಾಗೂ ಕುಟುಂಬದಲ್ಲಿ ಸದಸ್ಯರನ್ನು ಸೇರಿಸುವ ಅವಕಾಶಗಳು ಇದೀಗ ಜನಸಾಮಾನ್ಯರಿಗೆ ಕಲ್ಪಿಸಿಕೊಡಲಾಗಿದೆ.

ಆದರೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಇನ್ನೂ ಕೂಡ ಯಾವುದೇ ಕಾಲಾವಕಾಶವನ್ನು ಕಲ್ಪಿಸಿಕೊಡಲಾಗಿಲ್ಲ. ಆದ್ರೆ ಮೆಡಿಕಲ್ ಎಮರ್ಜೆನ್ಸಿ ಇರುವ ಅಭ್ಯರ್ಥಿಗಳಿಗೆ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ರೇಷನ್ ಕಾರ್ಡ್ ನಲ್ಲಿ ಬದಲಾವಣೆಗಳನ್ನು ಮಾಡಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಮುಖ್ಯವಾಗಿ ಚಿಕಿತ್ಸೆಗಳಿಗಾಗಿ ಬಿಪಿಎಲ್ ಕಾರ್ಡ್ ಅವಶ್ಯಕತೆ ಇದ್ದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಲಾಗಿದೆ.

ಇನ್ನು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅವಕಾಶಗಳು ಕಲ್ಪಿಸಿಕೊಡಲಾಗಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಿಸಿದೆ. ಶೀಘ್ರದಲ್ಲಿ ಹೊಸ ರೇಷನ್ ಕಾರ್ಡ್ ಗಳಿಗೆ ಮುಂದೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗುವುದು ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ.

GT World Mall: ಪಂಚೆಯುಟ್ಟ ರೈತನಿಗೆ ಅವಮಾನ ಪ್ರಕರಣ; ಜಿಟಿ ಮಾಲ್‌ ಸಿಬ್ಬಂದಿಯಿಂದ ಕ್ಷಮೆ

You may also like

Leave a Comment