Marriage Invitation: ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ(Marriage Invitation) ಇನ್ನು ಮುಂದೆ ವಧು-ವರರ ವಯಸ್ಸನ್ನು ಪ್ರಿಂಟ್ ಮಾಡಿಸುವುದು ಕಡ್ಡಾಯ ಎಂಬುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗಂತ ಇದು ನಮ್ಮ ಕರ್ನಾಟಕದಲ್ಲಿ ಜಾರಿಯಾದ ರೂಲ್ಸ್ ಅಲ್ಲ. ಬದಲಿಗೆ ರಾಜಸ್ಥಾನ ಸರ್ಕಾರ ಈ ಆದೇಶ ಹೊರಡಿಸಿದೆ.
ಯಾಕೆ ಈ ಹೊಸ ರೂಲ್ಸ್?
ಬಾಲ್ಯವಿವಾಹಗಳನ್ನು ತಡೆಗಟ್ಟುವ ಸಲುವಾಗಿ ವಧು ವರರ ವಯಸ್ಸು ದೃಢೀಕರಿಸುವ ದಾಖಲೆಯನ್ನು ಸಂಬಂಧಪಟ್ಟ ಕುಟುಂಬಗಳಿಂದ ಪಡೆಯುವಂತೆ ಮತ್ತು ಆಮಂತ್ರಣ ಪತ್ರಿಕೆಯಲ್ಲಿ ಇಬ್ಬರ ಜನ್ಮದಿನಾಂಕವನ್ನು ಮುದ್ರಿಸುವಂತೆ ಮುದ್ರಣಾಲಯಗಳಿಗೆ ಅಲ್ಲಿನ ಸರ್ಕಾರ ಸೂಚಿಸಿದೆ.
ಕೇವಲ ಈ ರೂಲ್ಸ್ ಅನ್ನು ಜಾರಿಗೊಳಿಸುವುದು ಮಾತ್ರವಲ್ಲದೆ ಸರ್ಕಾರವು ಬಾಲ್ಯ ವಿವಾಹಗಳು ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲು ಬಾಣಸಿಗರು, ಪಂಡಿತರು, ಟೆಂಟ್ ಹೌಸ್‌ಗಳು, ಬ್ಯಾಂಡ್ ಟ್ರೂಪ್‌ಗಳು, ಕ್ಯಾಟರಿಂಗ್‌ಗಳು ಮತ್ತು ಸಾಗಣೆದಾರರನ್ನು ಸಂಪರ್ಕಿಸಿ ಬಾಲ್ಯವಿವಾಹಕ್ಕೆ ಬಂದ ಆಹ್ವಾನದ ಕುರಿತು ಮಾಹಿತಿ ಪಡೆಯುವಂತೆಯೂ ಜಿಲ್ಲಾಡಳಿಗಳಿಗೆ ಸೂಚನೆ ನೀಡಲಾಗಿದೆ.
