Home » Trekking: ಇನ್ಮೇಲೆ ಚಾರಣ ಪ್ರಿಯರಿಗೆ ಹೊಸ ರೂಲ್ಸ್ ಜಾರಿ! ಜುಲೈನಿಂದ ಕರ್ನಾಟಕದ ಎಲ್ಲ ಟ್ರೆಕ್ಕಿಂಗ್ ತಾಣಗಳಿಗೂ ಆನ್​ಲೈನ್ ಬುಕಿಂಗ್ ಕಡ್ಡಾಯ!

Trekking: ಇನ್ಮೇಲೆ ಚಾರಣ ಪ್ರಿಯರಿಗೆ ಹೊಸ ರೂಲ್ಸ್ ಜಾರಿ! ಜುಲೈನಿಂದ ಕರ್ನಾಟಕದ ಎಲ್ಲ ಟ್ರೆಕ್ಕಿಂಗ್ ತಾಣಗಳಿಗೂ ಆನ್​ಲೈನ್ ಬುಕಿಂಗ್ ಕಡ್ಡಾಯ!

0 comments
Trekking

Trekking: ಇನ್ಮುಂದೆ ಚಾರಣ ಪ್ರಿಯರು ರಾಜ್ಯದಲ್ಲಿ ಚಾರಣಕ್ಕೆ ಹೋಗುವ ಪ್ಲಾನ್ ಇದ್ದಲ್ಲಿ ಆನ್​ಲೈನ್ ಬುಕಿಂಗ್ ಕಡ್ಡಾಯವಾಗಿದೆ. ಈಗಾಗಲೇ ಕರ್ನಾಟಕದ ಕೆಲವೇ ಕೆಲವು ಚಾರಣ ಸ್ಥಳಗಳಿಗೆ ಆನ್​ಲೈನ್ ಬುಕಿಂಗ್ ಕಡ್ಡಾಯ ಮಾಡಿ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆದ್ರೆ ಇದೀಗ ರಾಜ್ಯದ ಎಲ್ಲ ಟ್ರೆಕ್ಕಿಂಗ್ (Trekking)  ತಾಣಗಳಿಗೂ ಆನ್​ಲೈನ್ ಬುಕಿಂಗ್ ಜಾರಿಗೊಳಿಸಲು ಹೊರಟಿದೆ.

Pendrive Movie: ‘ಪೆನ್​ಡ್ರೈವ್’ ಚಿತ್ರದಲ್ಲಿ ತನಿಷಾ ಕುಪ್ಪಂಡ! ಸಿನಿಮಾದಲ್ಲೂ ವರ್ತೂರ್ ಸಂತೋಷ್ ಜೊತೆಗಿರ್ತಾರ?

 

ಹೌದು, ಕರ್ನಾಟಕದ ಎಲ್ಲಾ ಟ್ರೆಕ್ಕಿಂಗ್ ತಾಣಗಳಿಗೂ ಜುಲೈ ಮೂರನೇ ವಾರದಿಂದ ಆನ್‌ಲೈನ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಪರಿಚಯಿಸಲಾಗುವುದು ಎಂದು ಕರ್ನಾಟಕ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಮಂಗಳೂರು ವೃತ್ತದ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ಟ್ರೆಕ್ಕಿಂಗ್ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇನ್ನು ಮಂಗಳೂರು ವ್ಯಾಪ್ತಿಯ ಕುದುರೆಮುಖ, ನೇತ್ರಾವತಿ ಮತ್ತು ಇತರ ಕೆಲವು ಟ್ರೆಕ್ಕಿಂಗ್ ತಾಣಗಳಿಗೆ ಇಲಾಖೆಯು ಈಗಾಗಲೇ ಆನ್‌ಲೈನ್ ಬುಕಿಂಗ್ ಪರಿಚಯಿಸಿದೆ. ಜುಲೈ ತಿಂಗಳ ಕೊನೆಯಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದಿದ್ದಾರೆ.

ಸದ್ಯದಲ್ಲೇ ಒಂದೇ ವೆಬ್‌ಸೈಟ್‌ನಲ್ಲಿ ಎಲ್ಲಾ ಟ್ರೆಕ್ಕಿಂಗ್ ತಾಣಗಳಿಗೆ ಆನ್‌ಲೈನ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ಹದಿನೈದು ದಿನಗಳಲ್ಲಿ ಸಿದ್ಧವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಈ ಪ್ರಕ್ರಿಯೆಯನ್ನು ಸರಳೀಕರಿಸುವ ಮೂಲಕ ಬುಕ್ಕಿಂಗ್ ವ್ಯವಸ್ಥೆಯಲ್ಲಿನ ಅಕ್ರಮಗಳಿಗೆ ಕೊನೆ ಹಾಡುವ ಗುರಿಯನ್ನು ಹೊಸ ವ್ಯವಸ್ಥೆ ಹೊಂದಿದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.

Theft case: ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುತ್ತೀರಾ? ಈ ರೀತಿ ಮೋಸ ಹೋಗುತ್ತೀರಿ ಎಚ್ಚರ!

You may also like

Leave a Comment