New traffic rules: ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಸಂಚಾರಿ ಪೊಲೀಸರು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಅದಾಗ್ಯೂ, ಪದೇಪದೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರು ಹೆಚ್ಚಾಗುತ್ತಲೇ ಇದ್ದಾರೆ. ಇದೀಗ ಈ ಬಗ್ಗೆ ರೋಸಿ ಹೋಗಿರುವ ಸಾರಿಗೆ ಇಲಾಖೆ ಇದೀಗ ಹೊಸ ಟಫ್ ರೂಲ್ಸ್(New traffic rules)ಜಾರಿಗೆ ಮುಂದಾಗಿದ್ದಾರೆ.
ಹೌದು, ಇಷ್ಟು ದಿನ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಕೇವಲ ದಂಡ ಕಟ್ಟಿದರೆ ನಿಯಮ ಉಲ್ಲಂಘನೆ ಕೇಸ್ ಮುಗಿಯುವುದಿಲ್ಲ. ನಿಮ್ಮ ವಾಹನ ಸೀಜ್ ಮಾಡಿ ಗುಜುರಿಗೆ ಹಾಕಲಾಗುತ್ತದೆ. ಈ ಹೊಸ ನಿಯಮವನ್ನು ಕರ್ನಾಟಕ ಸಾರಿಗೆ ಇಲಾಖೆ ರೂಪಿಸಿದೆ. ಇದೀಗ ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಅಂದಹಾಗೆ ಬೆಂಗಳೂರಿನಲ್ಲಿ(Bengaluru) ವಾಹನ ಸವಾರರು ನಿರಂತರವಾಗಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲಿವೆ. ಪೊಲೀಸರು ಅರಿವು ಮೂಡಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಶೇಕಡಾ 50ರಷ್ಟು ದಂಡ ವಿನಾಯಿತಿಗೆ ಎರಡು ಬಾರಿ ಅವಕಾಶ ನೀಡಿದರೂ ಹೆಚ್ಚಿನ ಪರಿಣಾಮ ಆಗಿಲ್ಲ. ಇಷ್ಟಾದರೂ ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿವೆ.
ಹೊಸ ನಿಯಮದ ಪ್ರಕಾರ, ದುಬಾರಿ ದಂಡ ಪಾವತಿ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಗುಜುರಿಗೆ ಹಾಕಲಾಗುತ್ತದೆ. ಈ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಈ ಪ್ರಸ್ತಾವನೆಯನ್ನು ಪರಿಶೀಲಿಸಲು ಮುಂದಾಗಿದೆ. ಸಾರಿಗೆ ಇಲಾಖೆ ಈ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಂಡರೆ ಹೊಸ ಕಾನೂನು ಜಾರಿಗೆ ಬಲಿದೆ.
