Home » ಸಿನಿಮಾವನ್ನೂ ಮೀರಿಸುವಂತಿತ್ತು ಅಲ್ಲೊಂದು ಪ್ರೀತಿಯನ್ನು ಬೇರ್ಪಡಿಸುವ ದೃಶ್ಯ!! ಪೊಲೀಸರು ಹಾಗೂ ಪೋಷಕರ ಗೂಂಡಾಗಿರಿಗೆ ದೂರವಾದ ನವ ದಂಪತಿ

ಸಿನಿಮಾವನ್ನೂ ಮೀರಿಸುವಂತಿತ್ತು ಅಲ್ಲೊಂದು ಪ್ರೀತಿಯನ್ನು ಬೇರ್ಪಡಿಸುವ ದೃಶ್ಯ!! ಪೊಲೀಸರು ಹಾಗೂ ಪೋಷಕರ ಗೂಂಡಾಗಿರಿಗೆ ದೂರವಾದ ನವ ದಂಪತಿ

0 comments

ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿಯ ದಾಂಪತ್ಯಕ್ಕೆ ಠಾಣೆ ಮುಂಭಾಗವೇ ಪೊಲೀಸರು ಹಾಗೂ ಯುವತಿಯ ಪೋಷಕರು ವಿಲನ್ ಆಗಿ ಕಾಡಿದ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಒಡಿಸ್ಸಾ ಮೂಲದ ಯುವತಿಯೊಬ್ಬಳು ಮೈಸೂರಿನ ಯುವಕನನ್ನು ಪ್ರೀತಿಸಿ ಆತನೊಂದಿಗೆ ವಿವಾಹವಾಗಿ ಬಂದಿದ್ದಳು. ಅತ್ತ ಆಕೆಯ ಪೋಷಕರು ಒಡಿಸ್ಸಾ ದಲ್ಲಿ ನಾಪತ್ತೆ ದೂರು ದಾಖಲಿಸಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಮೈಸೂರಿಗೆ ಆಗಮಿಸಿದ್ದರು.

ಉದಯಗಿರಿ ಠಾಣೆಯ ಮುಂಭಾಗದಲ್ಲಿ ಯುವಕನಿಂದ ಯುವತಿಯನ್ನು ಬೇರ್ಪಡಿಸಲು ಎಲೆದಾಡಿದ್ದು ಕೊನೆಗೂ ತಮ್ಮ ಹಠದಲ್ಲಿ ಗೆದ್ದು ಕರುಣೆ ಇಲ್ಲದವರಂತೆ ಎಳೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಯುವಕ ಅದೆಷ್ಟು ಪರಿ ಪರಿಯಾಗಿ ಬೇಡಿದರೂ, ಕಿರುಚಾಡಿದರೂ ಕೇರ್ ಅನ್ನದೆ ಎಳೆದುಕೊಂಡು ಹೋಗುವ ಸಂದರ್ಭ ಪ್ರತಿಯೊಬ್ಬರೂ ಮೂಕ ಪ್ರೇಕ್ಷಕರಾಗಿದ್ದರು.

You may also like

Leave a Comment