Home » Kerala: ಹನಿಮೂನ್ ಮುಗಿಸಿ ಬರುತ್ತಿದ್ದ ನವ ವಿವಾಹಿತ ದಂಪತಿ ಅಪಘಾತದಲ್ಲಿ ಸಾವು – ಮನೆಗೆ 7 ಕಿ. ಮೀ ಬಾಕಿ ಇರುವಾಗಲೇ ನಡೆಯಿತು ಅವಘಡ

Kerala: ಹನಿಮೂನ್ ಮುಗಿಸಿ ಬರುತ್ತಿದ್ದ ನವ ವಿವಾಹಿತ ದಂಪತಿ ಅಪಘಾತದಲ್ಲಿ ಸಾವು – ಮನೆಗೆ 7 ಕಿ. ಮೀ ಬಾಕಿ ಇರುವಾಗಲೇ ನಡೆಯಿತು ಅವಘಡ

2 comments

Kerala: ಹನಿಮೂನ ಮುಗಿಸಿ ಬರುತ್ತಿದ್ದಂತಹ ನವದಂಪತಿಗಳು ಅಪಘಾತದಲ್ಲಿ ಮೃತಪಟ್ಟಂತಹ ಮನಕಲಕುವ ಘಟನೆ ಕೇರಳದಲ್ಲಿ ನಡೆದಿದೆ.

ಹೌದು, ಕೇರಳದ(Kerala) ಪತ್ತನಂತಿಟ್ಟ ಜಿಲ್ಲೆಯಲ್ಲಿ ಇಂದು (ಭಾನುವಾರ) ಪುನಲೂರು-ಮುವಾಟ್ಟುಪುಳ ರಾಜ್ಯ ಹೆದ್ದಾರಿಯಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಶಬರಿಮಲೆ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಳೆದ ತಿಂಗಳು ವಿವಾಹವಾಗಿದ್ದ ಅನು ಮತ್ತು ನಿಖಿಲ್ ಮಧುಚಂದ್ರಕ್ಕೆ (ಹನಿಮೂನ್‌) ಮಲೇಷ್ಯಾಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ವಾಪಸ್‌ ಆಗುತ್ತಿದ್ದ ವೇಳೆ ಮನೆಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ದಂಪತಿಗಳು ನವೆಂಬರ್ 30 ರಂದು ವಿವಾಹವಾದರು. ಅವರ ಮನೆಯಿಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಿಖಿಲ್ ಅವರ ತಂದೆ ಮಥಾಯ್ ಈಪೆನ್ ಮತ್ತು ಅನು ಅವರ ತಂದೆ ಬಿಜು ಪಿ ಜಾರ್ಜ್ ಕೂಡ ಸಾವನ್ನಪ್ಪಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

You may also like

Leave a Comment